ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದ ಶ್ರೀ ಬಸವೇಶ್ವರ ರಥೋತ್ಸವ ಭಕ್ತ ಸಾಗರದ ನಡುವೆ ಅದ್ಧೂರಿಯಾಗಿ ಜರುಗಿತು.
ಪ್ರತಿ ವರ್ಷ ಪದ್ಧತಿಯಂತೆ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರದಂದು ಮುಂಜಾನೆ ಪಲ್ಲಕ್ಕಿ ಹಾಗೂ ಕುಂಭ ಮೆರವಣಿಗೆ ನಡೆಯಿತು ಹಾಗೂ ಮಧ್ಯಾಹ್ನ ಮಹಾಪ್ರಸಾದ ಹಾಗೂ ಸಾಯಂಕಾಲ 4:00 ಘಂ ಮಹಾ ರಥೋತ್ಸವವನ್ನು ಸಕಲ ವಾದ್ಯ ಮೇಳಗಳೊಂದಿಗೆ ಹಾಗೂ ಮಹಾ ರಥೋತ್ಸವದ ಚಾಲನೆ ಕಾರ್ಯಕ್ರಮದಲ್ಲಿ ಷ, ಬ್ರ, ಪೂಜ್ಯ ಶ್ರೀ ಬಸವಲಿಂಗ ಶಿವಾಚಾರ್ಯರು ಹನಬರಟ್ಟಿ, ಪರಮಪೂಜ್ಯ ರಾಜಗುರು ಶ್ರೀ ಮಡಿವಾಳ ರಾಜ ಯೋಗೇಂದ್ರ ಮಹಾಸ್ವಾಮಿಗಳು ಪೊಜ್ಯರಿಂದ ಚಾಲನೆ ನೀಡಿ ಭಕ್ತರಿಂದ ಹರ ಹರ ಮಹದೇವ ಎಂದು ಜೈ ಕಾರದಿಂದ ಅದ್ದೂರಿಯಾಗಿ ಜರುಗಿತು.