ಕಲಕುಪ್ಪಿ ಗ್ರಾಮದ ಶ್ರೀ ಕರೆಮ್ಮ ದೇವಿ ಗುಡಿ ಉದ್ಘಾಟನೆ ಸಮಾರಂಭ ಮತ್ತು ಜಾತ್ರಾ ಮಹೋತ್ಸವವು ಶುಕ್ರವಾರದಂದು ಅದ್ದೂರಿಯಾಗಿ ಜರುಗಿತು.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನೇಸರಗಿ. ಇಲ್ಲಿಗೆ ಸಮೀಪದ ಮೇಕಲಮರಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಲಕುಪ್ಪಿ ಗ್ರಾಮದ ಶ್ರೀ ಕರೆಮ್ಮ ದೇವಿ ಗುಡಿ ಉದ್ಘಾಟನೆ ಸಮಾರಂಭ ಮತ್ತು ಜಾತ್ರಾ ಮಹೋತ್ಸವವು ಶುಕ್ರವಾರದಂದು ಅದ್ದೂರಿಯಾಗಿ ಜರುಗಿತು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಮಾತನಾಡಿ ಶ್ರೀ ಕರೆಮ್ಮ ದೇವಿಯ ಆಶೀರ್ವಾದದಿಂದ ಈ ಭಾಗದ ಜನ ಸುಖ ಸಂತೋಷದಿಂದ ಜೀವನ ಸಾಗಿಸುತ್ತಿದ್ದು, ತಾಯಿ ಮುಂದಿನ ದಿನಗಳಲ್ಲಿ ಎಲ್ಲ ಜನರಿಗೆ ಒಳ್ಳೆಯದು ಮಾಡಲಿ ಮತ್ತು ದೇವಸ್ಥಾನದ ಅಭಿವೃದ್ಧಿಗೆ ನನ್ನ ಸಹಾಯ ಸಹಕಾರ ಇದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ನೇಸರಗಿ ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಮಹಾವಾಮಿಗಳು ವಹಿಸಿದ್ದರು. ಸಭೆಯಲ್ಲಿ ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಮಾಜಿ ಜಿ ಪಂ ಸದಸ್ಯ ಈಶ್ವರ ಉಳ್ಳಾಗಡ್ಡಿ,ಮಾಜಿ ಗ್ರಾ ಪಂ ಅಧ್ಯಕ್ಷ ಗೌಡಪ್ಪ ಯರಡಾಲ, ನ್ಯಾಯವಾದಿ ಎಮ್ ವಾಯ್ ಸೋಮಣ್ಣವರ, ಅಡಿವಪ್ಪ ಮಾಳಣ್ಣವರ, ಯುವ ಮುಖಂಡ ಸಚಿನ ಪಾಟೀಲ, ಸಿದ್ಧಾರ್ಥ ಮರೆದ, ಪಾರೀಶ ಹುಲಮನಿ,ಮುಖ್ಯ ಶಿಕ್ಷಕರು, ಶಿಕ್ಷಕರು, ಎಲ್ಲ ಸಮಾಜದ ಮುಖಂಡರು,ಮೇಕಲಮರಡಿ ಹಾಗೂ ಕಲಕುಪ್ಪಿ, ಗ್ರಾ ಪಂ ಅಧ್ಯಕ್ಷರು, ಸದಸ್ಯರು,ಗ್ರಾಮಸ್ಥರು ಭಾಗವಹಿಸಿದ್ದರು.

Post a Comment

0Comments

Post a Comment (0)