*ಚಚಡಿ ಗ್ರಾಮದಲ್ಲಿ ೧೨ನೇ ವರ್ಷದ ಶ್ರೀ ಲಗಮಮ್ಮ ದೇವಿ ಹಾಗೂ ಶ್ರೀ ಬನಶಂಕರಿ ದೇವಿ ಕೊನೆ ದಿನದ ಜಾತ್ರಾ ಮಹೋತ್ಸವ ಯಶಸ್ವಿ.* ✍️* ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಾತ್ರಾ ಮಹೋತ್ಸವ ಸತತ ೪ ದಿನಗಳ ಕಾಲ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು ಜಾತ್ರೆಯಲ್ಲಿ ಶೇಷವಾಗಿ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಂಡಿದ್ದರು ಹೋಮ ಹವನ ರುದ್ರಾಭಿಷೇಕ ಕೃಷಿ ವಿಚಾರ ಸಂಕೀರ್ಣ ಹಾಗೂ ಧರ್ಮಸಭೆ ಶಾಲಾ ಮಕ್ಕಳಿಂದ ರಸಪ್ರಶ್ನೆ ಕಾರ್ಯಕ್ರಮ ಅದು ಅಲ್ಲದೆ ದೇವಿ ಪುರಾಣ ಸಾಮೂಹಿಕ ವಿವಾಹಗಳು ರೇವಣಸಿದ್ದೇಶ್ವರ ನಾಟ್ಯ ಸಂಘ ಬೂದಿಹಾಳ ಇವರಿಂದ ಶ್ರೀ ಅಜಾತ ನಾಗಲಿಂಗೇಶ್ವರ ಮಹಾತ್ಮೆ ಎಂಬ ಭಕ್ತಿ ಪ್ರಧಾನ ನಾಟಕ ಜರುಗಿತು ಶ್ರೀ ಲಗಮಮ್ಮ ದೇವಿ ಹಾಗೂ ಶ್ರೀ ಬನಶಂಕರಿ ದೇವಿ ಪಲ್ಲಕ್ಕಿ ಉತ್ಸವ ಕುಂಭಮೇಳದೊಂದಿಗೆ ಗ್ರಾಮದ ಬೀದಿಯಲ್ಲಿ ಮೇರವಣಿಗೆ ನಂತರ ನಿರಂತರ ಉಡಿ ತುಂಬವ ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಆಶ್ರಯದಲ್ಲಿ ಶ್ರೀ ಮಹಾಲಕ್ಷ್ಮಿ ಸಂಸ್ಕೃತಿಕ ಶಾಲಾ ಹಾಗೂ ಮಹಿಳಾ ಅಭಿವೃದ್ಧಿ ಸಂಘ ಹಿರೇಬುದುನೂರು ಹಾಗೂ ಶ್ರೀ ಲಗಮಮ್ಮ ದೇವಿ ಅಭಿವೃದ್ಧಿ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಕಲಾಮೇಳ ಜಾನಪದ ಸಂಸ್ಕೃತಿ ಉತ್ಸವ ಮಹಾರಥೋತ್ಸವ ತೇರು ಎಳೆಯುವ ಮುಖಾಂತರ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು ಸಿಡಿಮದ್ದು ಹಾರಿಸುವ ಮುಖಾಂತರ ಜಾತ್ರಾ ಮಹೋತ್ಸವನ್ನು ಯಶಸ್ವಿಗೊಳಿಸಿ ಲಗಮಮ್ಮ ದೇವಿ ಹಾಗೂ ಶ್ರೀ ಬನಶಂಕರಿ ದೇವಿ ಅಮ್ಮನ ಸೇವೆಗೆ ಪಾತ್ರರಾದರು.
💐🙏🙏. *_ವರದಿ :ಶಿವಾನಂದ ಕಿಲ್ಲೇದಾರ_*