ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ನಡೆದ ಮೊದಲ ಹಂತದ ಮೂರು ದಿನಗಳ ಹುಂಡಿ ಎಣಿಕೆಯಲ್ಲಿ ದಾಖಲೆಯ ಮಟ್ಟದ ಕಾಣಿಕೆ ಸಂಗ್ರಹವಾಗಿದ್ದು, ಒಟ್ಟು ರೂ.1.99 ಕೋಟಿ ಮೌಲ್ಯದ ದೇಣಿಗೆ ಲಭಿಸಿದೆ.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸಮರ್ಪಿಸಿದ ಕಾಣಿಕೆಗಳ ಎಣಿಕೆ ಕಾರ್ಯವನ್ನು ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ತಹಶೀಲ್ದಾರ್ ಕಚೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳ ಸಮ್ಮುಖದಲ್ಲಿ ಗುರುವಾರ ಪೂರ್ಣಗೊಳಿಸಲಾಯಿತು.
ದಿನವಾರು ಸಂಗ್ರಹ ವಿವರ :
🔹 ಜನವರಿ 19 ರಂದು ನಡೆದ ಎಣಿಕೆಯಲ್ಲಿ,
ಚಿನ್ನಾಭರಣ: ರೂ.8.65 ಲಕ್ಷ,
ಬೆಳ್ಳಿ ಆಭರಣ: ರೂ.5.05 ಲಕ್ಷ ಮತ್ತು
ನಗದು: ರೂ.56.82 ಲಕ್ಷ ಹಣ ಸಂಗ್ರಹವಾಗಿದೆ.
🔹 ಜನವರಿ 21 ರಂದು ನಡೆದ ಎಣಿಕೆಯಲ್ಲಿ,
ಚಿನ್ನ: ರೂ.3.15 ಲಕ್ಷ.
ಬೆಳ್ಳಿ: ರೂ.1.67 ಲಕ್ಷ ಮತ್ತು
ನಗದು: ರೂ.72.99 ಲಕ್ಷ ಹಣ ಸಂಗ್ರಹವಾಗಿದೆ.
🔹 ಜನವರಿ 22 ರಂದು ನಡೆದ ಎಣಿಕೆಯಲ್ಲಿ,
ಚಿನ್ನ: ರೂ.3.33 ಲಕ್ಷ.
ಬೆಳ್ಳಿ: ರೂ.4.77 ಲಕ್ಷ ಮತ್ತು
ನಗದು: ರೂ.42.83 ಲಕ್ಷ ಹಣ ಸಂಗ್ರಹವಾಗಿದೆ.
➡️ ಒಟ್ಟು ಸಂಗ್ರಹ:
ಚಿನ್ನಾಭರಣ – ರೂ.15.10 ಲಕ್ಷ.
ಬೆಳ್ಳಿ ಆಭರಣ – ರೂ.11.51 ಲಕ್ಷ.
ನಗದು – ರೂ.1.72 ಕೋಟಿ.
ಒಟ್ಟು ಮೊತ್ತ – ರೂ.1.99 ಕೋಟಿ ಹಣ ಸಂಗ್ರಹವಾಗಿದೆ.
ಈ ಸುದ್ದಿ ನೋಡಿ : ಸವದತ್ತಿ ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!
ವಿದೇಶಿ ಕರೆನ್ಸಿ ಹಾಗೂ ಅಮಾನ್ಯ ನೋಟುಗಳು ಪತ್ತೆ :
ಹುಂಡಿ ಎಣಿಕೆಯ ವೇಳೆ ವಿವಿಧ ದೇಶಗಳ ಕರೆನ್ಸಿ ನೋಟುಗಳು ಹಾಗೂ ಅಮಾನ್ಯಗೊಂಡ ಭಾರತೀಯ ನೋಟುಗಳು ಪತ್ತೆಯಾಗಿವೆ.
🔸 ಅಮಾನ್ಯಗೊಂಡ ಭಾರತೀಯ ನೋಟುಗಳು:
ರೂ.1,000 ಮುಖಬೆಲೆಯ 1 ನೋಟು.
ರೂ.500 ಮುಖಬೆಲೆಯ 1 ನೋಟು ಮತ್ತು
ರೂ.2,000 ಮುಖಬೆಲೆಯ 1 ನೋಟು.
🔸 ವಿದೇಶಿ ಕರೆನ್ಸಿಗಳು:
ಅಮೆರಿಕಾ: $20 ಮುಖಬೆಲೆಯ 1 ನೋಟು.
ಯುರೋಪ್: €10 ಮತ್ತು €5 ಮುಖಬೆಲೆಯ ತಲಾ 2 ನೋಟುಗಳು.
ಓಮನ್: 100 ಬೈಜಾ ಹಾಗೂ 1 ರಿಯಾಲ್ ತಲಾ 2 ನೋಟುಗಳು ಮತ್ತು
ಕೆನಡಾ: $20 ಮುಖಬೆಲೆಯ 5 ನೋಟುಗಳು.
ಸವದತ್ತಿ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಹುಂಡಿ ಎಣಿಕೆ: ದಾಖಲೆ ರೂ.1.99 ಕೋಟಿ ಕಾಣಿಕೆ ಸಂಗ್ರಹ.
ವಿದೇಶಿ ಕರೆನ್ಸಿಗಳು
ಈ ಕುರಿತು ಮಾಹಿತಿ ನೀಡಿದ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸಹಕಾರ್ಯದರ್ಶಿ ನಾಗರತ್ನಾ ಚೋಳಿನ ಅವರು, ಭಕ್ತರ ಭಕ್ತಿಭಾವದಿಂದಾಗಿ ಈ ಬಾರಿ ದಾಖಲೆಯ ಮಟ್ಟದ ಕಾಣಿಕೆ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಭಕ್ತರ ಅಪಾರ ನಂಬಿಕೆ :
ಶಕ್ತಿಪೀಠವಾಗಿರುವ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ತಮ್ಮ ಹರಕೆಗಳನ್ನು ಈಡೇರಿಸಲು ಭಕ್ತಿಯಿಂದ ಕಾಣಿಕೆ ಸಲ್ಲಿಸುತ್ತಿದ್ದಾರೆ. ಈ ಬಾರಿ ದಾಖಲೆ ಮೊತ್ತ ಸಂಗ್ರಹವಾಗಿರುವುದು ದೇವಾಲಯದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.