ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸಮಿತಿ ಹಾಗೂ ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಒಕ್ಕುಂದ ಉತ್ಸವ–2026 ಫೆ.1ರಂದು ಭಾನುವಾರ ಜರುಗಲಿದೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
: ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸಮಿತಿ ಹಾಗೂ ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಒಕ್ಕುಂದ ಉತ್ಸವ–2026 ಫೆ.1ರಂದು ಭಾನುವಾರ ಜರುಗಲಿದೆ ಎಂದು ಪ್ರಾಚಾರ್ಯ ಡಾ. ಸಿ.ಬಿ. ಗಣಾಚಾರಿ ತಿಳಿಸಿದರು.

ಅವರು ಮಂಗಳವಾರ ಬೈಲಹೊಂಗಲ ನಗರದ ಪ್ರವಾಸಿ ಮಂದಿರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿ, 
ಕ್ರಿ.ಶ. 8ನೇ ಶತಮಾನದ ರಾಷ್ಟ್ರಕೂಟ ಕಾಲಘಟ್ಟದಲ್ಲಿ ಪಟ್ಟದಕಲ್ಲು–ಕೋಪನ–ಕೊಲಗೇರಿ–ಒಕ್ಕುಂದ ಪ್ರದೇಶದವರು “ಅಚ್ಚ ಕನ್ನಡ” ಮಾತನಾಡುತ್ತಿದ್ದರು ಎಂಬ ಇತಿಹಾಸದ ಪೋಷಣೆಗಾಗಿ ಕಳೆದ ಆರು ವರ್ಷಗಳಿಂದ ಉತ್ಸವ ಆಯೋಜನೆ ನಡೆಯುತ್ತಿದೆ.

ಫೆ.1ರಂದು ಬೆಳಿಗ್ಗೆ 9ಕ್ಕೆ ಕಲ್ಲಗುಡಿ (ತ್ರಿಕೂಟೇಶ್ವರ) ದೇವಸ್ಥಾನದಿಂದ ನೃಪತುಂಗ ವೇದಿಕೆವರೆಗೆ ಜ್ಯೋತಿ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ಕಾರ್ಯಕ್ರಮವನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸುವರು. ಬಾಬಾಸಾಹೇಬ ಪಾಟೀಲ ಜ್ಯೋತಿ ಬೆಳಗಿಸುವರು. ನಿರ್ಮಲಾ ಕಲ್ಲಿ ಅಧ್ಯಕ್ಷತೆ ವಹಿಸುವರು. ಹಲವು ಗಣ್ಯಅತಿಥಿಗಳು ಭಾಗವಹಿಸಲಿದ್ದಾರೆ. ಸಾಹಿತಿ ವೈ. ಎಂ. ಯಾಕೋಳ್ಳಿ ಉಪನ್ಯಾಸ ನೀಡಲಿದ್ದಾರೆ.

ಕಲಾವಿದ ಸಿ.ಕೆ. ಮೆಕ್ಕೆದ ಮಾತನಾಡಿ, ಯುವಪೀಳಿಗೆಗೆ ತಿರುಳ್ಗನ್ನಡದ ಇತಿಹಾಸ ಪರಿಚಯಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು. ರಾತ್ರಿ ರವೀಂದ್ರ ಸೊರಗಾಂವಿ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದರು.

ಈ ವೇಳೆ ಮಹಾಂತೇಶ ತುರಮರಿ, ರಾಮನಗೌಡ ಪಾಟೀಲ, ಅಶೋಕ ಭದ್ರಶೆಟ್ಟಿ, ಗಜದಂಡ ಸುತಗಟ್ಟಿ, ಸಂಗಣ್ಣ ಭದ್ರಶೆಟ್ಟಿ, ಸುರೇಶ ಗಣಾಚಾರಿ, ಮಡಿವಾಳಪ್ಪ ತಡಸಲ, ಸಿದ್ದನಗೌಡ ಪಾಟೀಲ, ಈರನಗೌಡ ಶೀಲವಂತರ, ಈರಣ್ಣ ಹೊಸೂರ ಇದ್ದರು.

Post a Comment

0Comments

Post a Comment (0)