ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ದಿ
ಪಡೆದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಮಹಾ ದಾಸೋಹದಲ್ಲಿ ಈಗ ಮಿರ್ಚಿ ಬಜಿಗಳದ್ದೇ ಸದ್ದು. ಹೌದು. ಲಕ್ಷ ಲಕ್ಷ ಭಕ್ತರಿಗೆ 5 ಲಕ್ಷಕ್ಕೂ ಹೆಚ್ಚು ಬಿಸಿ ಬಿಸಿ ಮಿರ್ಚಿಗಳನ್ನು ಸಿದ್ದಪಡಿಸಿ ದಾಸೋಹ ಸೇವೆಗೈಯಲಾಯಿತು. ಸ್ವತಃ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಕಾದ ಎಣ್ಣೆಯಲ್ಲಿ ಮಿರ್ಚಿ ತೇಲಿ ಬಿಡುವ ಮೂಲಕ ಈ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
ಕೊಪ್ಪಳದ ಸಮಾನ ಮನಸ್ಕ ಗೆಳೆಯರ ಬಳಗವು ಪ್ರತಿ ವರ್ಷ ರಥೋತ್ಸವ ನೆರವೇರಿದ ಮರುದಿನದಂದು ಬಿಸಿ ಬಿಸಿ ಮಿರ್ಚಿ ಸಿದ್ಧಪಡಿಸಿ ದಾಸೋಹಕ್ಕೆ ಅರ್ಪಿಸುವ ಕಾಯಕವನ್ನು ಕಳೆದ 11 ವರ್ಷಗಳಿಂದ ಮುನ್ನಡೆಸಿಕೊಂಡು ಬಂಎಣ್ಣೆಯಲ್ಲಿ ಮಿರ್ಚಿ ತೇಲಿ ಬಿಟ್ಟು ಸೇವೆಗೆ ಗವಿಶ್ರೀ ಚಾಲನೆ:
ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಮಹಾ ದಾಸೋಹದಲ್ಲಿ ಮಿರ್ಚಿ ಸಿದ್ದತೆಯ ಸ್ಥಳಕ್ಕೆ ಧಾವಿಸಿ ಬಾಣಸಿಗರು ಸೇರಿದಂತೆ ಗೆಳೆಯರ ಬಳಗಕ್ಕೆ ಸಾಥ್ ನೀಡುವ ಜತೆಗೆ ತಾವೂ ಸಹ ಎಣ್ಣೆಯಲ್ಲಿ ಮಿರ್ಚಿ ತೇಲಿ ಬಿಡುವ ಮೂಲಕ ಮಿರ್ಚಿ ತಯಾರು ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಮೆಣಸಿನಕಾಯಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ನೂರಾರು ಮಹಿಳೆಯರ ಬಳಿಯೂ ತೆರಳಿ ಹಾರೈಸಿದರು.ದಿದ್ದು, ಅದರಂತೆ ಗೆಳೆಯರ ಬಳಗದ ಸೇವೆ ಈ ವರ್ಷದ ಮಂಗಳವಾರವೂ ಮುಂದುವರಿಯಿತು.
ಮಿರ್ಚಿಗೆ ಏನೆಲ್ಲಾ ಪದಾರ್ಥ ಬಳಕೆ?:
ಮಹಾ ದಾಸೋಹ ಭವನದಲ್ಲಿ ಮಂಗಳವಾರ ಬೆಳಗ್ಗೆ 5 ರಿಂದ ಗೆಳೆಯರ ಬಳಗದ ತಂಡ ಮಿರ್ಚಿ ಸಿದ್ಧತೆ ಕಾರ್ಯದಲ್ಲಿ ತೊಡಗಿತು. ಮಿರ್ಚಿಗಳ ಸಿದ್ದತೆಗೆ 25 ಕ್ವಿಂಟಲ್ ಹಸೆಕಡ್ಲಿಬೇಳೆ ಹಿಟ್ಟು, 22 ಕ್ವಿಂಟಲ್ನಷ್ಟು ಹಸಿ ಮೆಣಸಿನಕಾಯಿ, 25 ಕೆಜಿ ಅಜಿವಾನ, 25 ಕೆಜಿ ಸೋಡಾಪುಡಿ, 75 ಕೆಜಿ ಉಪ್ಪು, 60 ಸಿಲಿಂಡರ್, 12 ಬ್ಯಾರಲ್ ಒಳ್ಳೆಣ್ಣಿ ಬಳಕೆ ಮಾಡಲಾಗಿದೆ.
25 ಕ್ವಿಂಟಲ್ನಲ್ಲಿ 5 ಲಕ್ಷ ಮಿರ್ಚಿ ತಯಾರು :ಕಳೆದ ವರ್ಷ 22 ಕ್ವಿಂಟಲ್ ನಷ್ಟು ಹಸಿಕಡ್ಲೆà ಬೇಳೆ ಹಿಟ್ಟಿನಲ್ಲಿ ಲಕ್ಷ ಲಕ್ಷ ಮಿರ್ಚಿಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ ಈ ವರ್ಷ 25 ಕ್ವಿಂಟಲ್ ಹಿಟ್ಟಿನಲ್ಲಿ ಮಿರ್ಚಿಗಳನ್ನು ಸಿದ್ಧಪಡಿಸಿದ್ದು ಅಂದಾಜು 5 ಲಕ್ಷ ಮಿರ್ಚಿಗಳು ದಾಸೋಹ ಭವನದಲ್ಲಿ ತಯಾರುಗೊಂಡವು. ಬೆಳಿಗ್ಗೆ 5 ರಿಂದಲೇ ಸಿದ್ಧತಾ ಕಾರ್ಯ ನಡೆದು ರಾತ್ರಿ 10 ಗಂಟೆವರೆಗೂ ನಿರಂತರವಾಗಿ ಮಿರ್ಚಿ ತಯಾರು ಮಾಡುವ ಕಾರ್ಯ ನಡೆಯಿತು. 25 ಗ್ರಾಮಗಳ 600ಕ್ಕೂ ಹೆಚ್ಚು ಬಾಣಸಿಗರು 5 ಲಕ್ಷ ಮಿರ್ಚಿಗಳನ್ನು ಸಿದ್ದಪಡಿಸಿ, ಮಹಾ ದಾಸೋಹಕ್ಕೆ ಅರ್ಪಿಸಿದರು.