ಬೈಲಹೊಂಗಲ: ಸಮೀಪದ ಮರಕುಂಬಿ ಗ್ರಾಮದ ಇನಾಮದಾರ
ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರಂತ ಸಂಭವಿಸಿ ಸಾವನ್ನಪ್ಪಿದ ಮೃತ ಬಡ ಕಾರ್ಮಿಕರ ಕುಟುಂಬಗಳಿಗೆ ತಲಾ ಒಂದು ಕೋಟಿ ಪರಿಹಾರಧನ ನೀಡಬೇಕೆಂದು ಒತ್ತಾಯಿಸಿ ಮೃತ ಕಾರ್ಮಿಕ ಕುಂಟಬಸ್ಥರು, ಗ್ರಾಮಸ್ಥರು, ರೈತಪರ ಹೋರಾಟಗಾರರು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿ ಗುರುವಾರ ಉಗ್ರ ಪ್ರತಿಭಟನೆ ನಡೆಸಿದರು.
ನಗರದ ಚನ್ನಮ್ಮನ ವೃತ್ತದಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ ತಾಲ್ಲೂಕಿನ ಆರವಳ್ಳಿ ಗ್ರಾಮದ ಮೃತ ಕಾರ್ಮಿಕ ಮಂಜುನಾಥ ಮಡಿವಾಳಪ್ಪ ಕಾಜಗಾರ ಅವರ ಶವವಿಟ್ಟು ಪ್ರತಿಭಟನೆ ನಡೆಸಿದ ಮೃತ ಕುಟುಂಬಸ್ಥರು, ಗ್ರಾಮಸ್ಥರು, ರೈತಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮೃತ ಬಡ ಕಾರ್ಮಿಕರ ಸಾವಿಗೆ ಕಾರ್ಖಾನೆ ಮಾಲಿಕರು, ಆಡಳಿತ ಮಂಡಳಿ ಸದಸ್ಯರೇ ನೇರ ಹೊಣೆಗಾರರು ಎಂದು ದೂರಿದರು. ಬಡ ರ್*ಕರು ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ದುರಂತ ಸಾವಿಗಿಡಾಗಿದರೂ ಕಾರ್ಖಾನೆ ಮಾಲಿಕರು, ವ್ಯವಸ್ಥಾಪಕರು. ಆಡಳಿತ ಮಂಡಳಿ ಸದಸ್ಯರು ಮೃತ ಕುಟು 12 ಯಾವುದೇ ಸಾಂತ್ವಾನ ಹೇಳದೆ, ಅಮಾನವೀಯವಾಗಿ ನಡೆದುಕೊಂಡಿದ್ದಾರೆಂದು ಆಕ್ರೋಶ ಹೊರ ಹಾಕಿದರು.
ಮೃತ ಕಾರ್ಮಿಕ ಮಂಜುನಾಥ ಕಾಜಗಾರ ಅವರ ತಂದೆ ಮಡಿವಾಳಪ್ಪ ಕಾಜಗಾರ ಮಾತನಾಡಿ, ನನ್ನ ಮಗನ ಸಾವಿಗೆ ಕಾರ್ಖಾನೆಯವರೇ ನೇರ ಹೊಣೆಯಾಗಿದ್ದಾರೆ. ಮಗನಿಗೆ ಹೆಣ್ಣು ಕೊಡದ್ದರಿಂದ ಕಾರ್ಖಾನೆ ಕೆಲಸಕ್ಕೆ ಕಳಿಸಲಾಗಿತ್ತು. ಆದರೆ ಇಂದು ಶವವಾಗಿ ಬಂದಿದ್ದಾನೆ. ಇನ್ನೂ ನಮಗೆ ಯಾರು ಗತಿ ಇಲ್ಲದಂತಾಗಿದೆ. ದುಡಿಯುವ ಒಬ್ಬ ಮಗನನ್ನು ದೇವರು ಬಲಿ ಪಡೆದ. ಕಾರ್ಖಾನೆಯವರು ನನ್ನ ಮಗನನ್ನು ತಂದು ಕೊಡಲಿ ಎಂದು ಕಣ್ಣಿರು ಹಾಕಿದರು.
ಪ್ರತಿಭಟನಾಕಾರರು ಕಾರ್ಖಾನೆ ಮಾಲಿಕರು, ಆಡಳಿತ ಮಂಡಳಿಯವರು ಕೋಟ್ಯಾಧೀಶರಾಗಿದ್ದಾರೆ. ಬಡ ಕೂಲಿ ಕಾರ್ಮಿಕರಿಗೆ ಪರಿಹಾರ ನೀಡಲು ಹಿಂದೇಟು ಹಾಕುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿ, ಡಾ.ಪ್ರಭಾಕರ ಕೋರೆ. ಆಡಳಿತ ಮಂಡಳಿ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದು, ರಸ್ತೆ ತಡೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕಾರ್ಖಾನೆ ವ್ಯವಸ್ಥಾಪಕ ರವೀಂದ್ರ ಪಟ್ಟಣಶೆಟ್ಟಿ ಮಾತನಾಡಿ. ಮೃತ ಕಾರ್ಮಿಕರ ಸಾವಿನ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ಆಗಾಧವಾಗಿದ್ದು, ಮೃತ ಕುಟುಂಬಕ್ಕೆ ಆಡಳಿತ ಮಂಡಳಿ ವತಿಯಿಂದ ಪ್ರತಿ ಪ್ರತಿ ಕುಟುಂಬಕ್ಕೆ 15 ಲಕ್ಷ ರೂ.ಪರಿಹಾರ ನೀಡುವುದಾಗಿ ತಿಳಿಸಿದಾಗ, ಪ್ರತಿಭಟನಾಕರಾರು ಒಪ್ಪದೆ ಒಂದು ಕೋಟಿ ರೂ.ಪರಿಹಾರ ನೀಡುವಂತೆ ಒತ್ತಾಯಿಸಿದರು.
ತಹಶೀಲ್ದಾರ ಹನುಮಂತ ಶೀರಹಟ್ಟಿ ಭೇಟಿ ನೀಡಿ ಪ್ರತಿಭಟನಾಕಾರರ ಮನವೋಲಿಸಲು ಪ್ರಯತ್ನಿಸಿದರು. ಅದಕ್ಕೂ ಕೂಡಾ ತಮ್ಮ ಪಟ್ಟು ಸಡಿಸದೆ ಹೋರಾಟ ಮುಂದುವರೆಸಿದರು. ಆಹಿತಕರ ಘಟನೆ ನಡೆಯದಂತೆ ಡಿವಾಯ್ ಎಸ್ಪಿ ಡಾ.ವೀರಯ್ಯಾ ಹಿರೇಮಠ, ಸಿಪಿಐಗಳಾದ ಪ್ರಮೋದ ಯಲಿಗಾರ, ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಎಪ್.ವೈ.ಮಲ್ಲೂರ, ಗುರುರಾಜ ಕಲಬುರಗಿ, ಪ್ರವೀಣ ಗಂಗೊಳ್ಳಿ, ಸುಮಾ ನಾಯಕ ನೇತೃತ್ವದಲ್ಲಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು.
ಮೃತ ಕಾರ್ಮಿಕನ ಚಿಕ್ಕಪ್ಪರಾದ ಸುರೇಶ ಕಾಜಗಾರ, ಬಸ್ಸು ಕಾಜಗಾರ, ಗ್ರಾಮಸ್ಥರಾದ ಸಿದ್ದಪ್ಪ ಜಳಕದ, ದೇಮಪ್ಪ ತಡಸಲ, ಈರಪ್ಪ ಲಿಂಗದಳ್ಳಿ, ಮಹಾಂತೇಶ ಭಬ್ಬಿ, ಮಹಾದೇವ ಬೆಳವಡಿ, ಬಸವರಾಜ ಬಡವಣ್ಣವರ, ಮಲ್ಲಿಕಾರ್ಜನ ಹೂಗಾರ, ಯಲ್ಲಪ್ಪ ಬಂಡಾರಿ. ಶಿವಪ್ಪ ಪೆಂಟೇದ, ರೈತ ಸಂಘದ ರಾಜ್ಯಾಧ್ಯಕ್ಷರಾದ ಚುನ್ನಪ್ಪ ಪೂಜಾರಿ, ಶಂಕರ ಬೋಳನ್ನವರ, ಜಿಲ್ಲಾ ಮುಖಂಡರಾದ ಅಪ್ಪಾಸಾಹೇಬ ಲಕ್ಕುಂಡಿ, ಮಲ್ಲಿಕಾರ್ಜುನ ಹುಂಬಿ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ, ಮಹಿಳಾ ಜಿಲ್ಲಾಧ್ಯಕ್ಷೆ ಆಸ್ಸಾ ಜೋಟದಾರ, ಕಿಶನ ನಂದಿ, ಪ್ರೇಮ ಚೌಗಲಾ, ಶಿವಾನಂದ ಮುಗಳಿಹಾಳ, ಮಲ್ಲಪ್ಪ ಏಣಗಿ, ಯಲ್ಲಪ್ಪ ಕವಲಾಪೂರ, ಈರಪ್ಪ ದಳವಾಯಿ ಸೇರಿದಂತೆ ನೂರಾರು ರೈತರು. ಗ್ರಾಮಸ್ಥರು ಪಾಲ್ಗೊಂಡಿದ್ದರು.