ಹಿರೇಬಾಗೇವಾಡಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಲಿಂಗಾಯತ ಮಠಾದೀಶರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಬೆಂಬಲ*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
**ಹಿರೇಬಾಗೇವಾಡಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಲಿಂಗಾಯತ ಮಠಾದೀಶರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಬೆಂಬಲ* 
    ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ನಿಗೆ ಯೋಗ್ಯ ಬೆಲೆ ನಿಗದಿ ಪಡಿಸಬೇಕೆಂದು ಹಿರೇಬಾಗೇವಾಡಿಯಲ್ಲಿ ಗುರುವಾರ: ದಿನಾಂಕ 06/11/2025 ರಂದು ರೈತರ ಪ್ರತಿಭಟನೆಯಲ್ಲಿ ಲಿಂಗಾಯತ ಮಠಾದೀಶರು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪಧಾದಿಕಾರಿಗಳು ಭಾಗವಹಿಸಿ ಬೆಂಬಲ ಸೂಚಿಸಿದರು.
       ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಹಂದಿಗುಂದದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಶೇಗುಣಿಸಿಯ ಪೂಜ್ಯ ಮಹಾಂತ ಪ್ರಭುಸ್ವಾಮಿಗಳು, ಅರಳಿಕಟ್ಟಿ ಪೂಜ್ಯರು, ಶಿವಬಸವ ದೇವರು ಹಾಗೂ ಸಿದ್ಧಬಸವ ಸ್ವಾಮಿಗಳು ಭಾಗವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದಿಂದ ಜಿಲ್ಲಾ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಶ್ರೀಬಸವರಾಜ ರೊಟ್ಟಿ, ಶ್ರೀ ಮೋಹನ ಗುಂಡ್ಲೂರ, ಶ್ರೀ ಸಿ ಎಂ ಬೂದಿಹಾಳ, ಶ್ರೀ ಮುರಿಗೆಪ್ಪ ಬಾಳಿ, ಶ್ರೀ ಎಫ್ ಆರ್ ಪಾಟೀಲ ಶ್ರೀ ಬಿ ಜಿ ವಾಲಿ ಇಟಗಿ ಹಾಗೂ ಪಧಾದಿಕಾರಿಗಳು ಸುತ್ತಮುತ್ತಲಿನ ರೈತರು ಮತ್ತು ರೈತರ ಮಕ್ಕಳು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. *_ವರದಿ: ಶಿವಾನಂದ ಕಿಲ್ಲೇದಾರ_*

Post a Comment

0Comments

Post a Comment (0)