ಬೈಲಹೊಂಗಲ ಕಬ್ಬು ಬೆಳೆಗಾರರ ನಾಳೆ ನಡೆಯಬೇಕಿದ್ದ NH4 ಹೈವೇ ಬಂದ್ ಮುಂದೂಡಲಾಗಿದೆ....

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ: ಕಬ್ಬು ಬೆಳೆಗಾರರ ನಿರಂತರ ಹೋರಾಟ ಬೈಲಹೊಂಗಲದ ಚೆನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡಿದ್ದು ನಾಳೆ ದಿನ ಕಬ್ಬು ಬೆಳೆಗಾರರು NH4 ಹೈವೇ ಬಂದ್ ಮಾಡಿ ಪ್ರತಿಭಟಿಸಲು ಕರೆ ನೀಡಿದ್ದರು, ಆದರೆ ಇಂದು ಹೋರಾಟದ ಕೇಂದ್ರಬಿಂದು ಆಗಿರುವ ಚೋನಪ್ಪ ಪೂಜಾರಿ ಹಾಗೂ ಶಶಿಕಾಂತ್ ಪಡಸಲಗಿ ಗುರೂಜಿಯವರ ನೇತೃತ್ವದಲ್ಲಿ ಹೋರಾಟ ನಡೆದ ಸ್ಥಳ ಗುರ್ಲಾಪುರ್ ಕ್ರಾಸ್ ಗೆ ಮಾನ್ಯ ಸಕ್ಕರೆ ಸಚಿವರಾದ ಶಿವಾನಂದ್ ಪಾಟೀಲ್ ಭೇಟಿ ನೀಡಿ ರೈತರ ಜೊತೆ ಸಂದಾನ ನಡೆಸಲು ಪ್ರಯತ್ನ ಮಾಡಿದರು ನಮ್ಮ ಸರ್ಕಾರದಿಂದ ನಾವು ನಾಳೆ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಕಾರ್ಖಾನೆಗಳ ಮಾಲೀಕರ ಸಭೆಯನ್ನು ಕರೆದು ನಾಳೆ ಸಾಯಂಕಾಲದ ವರೆಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಆದ ಕಾರಣ ಹೋರಾಟ ನಿರತ ರೈತರು ನಮಗೆ ನಾಳೆ ಒಂದು ದಿವಸ ಕಾಲಾವಕಾಶ ಕೊಡಿ ಎಂದು ವಿನಂತಿಸಿದ್ದಾರೆ, ಆದಕಾರಣ ಬೈಲಹೊಂಗಲದ ಕಬ್ಬು ಬೆಳೆಗಾರರ ನೇತೃತ್ವದಲ್ಲಿ ನಾಳೆ ನಡೆಯಬೇಕಿದ್ದ NH4 ಹೈವೇ ಬಂದ ಮುಂದೂಡಲಾಗಿದೆ ಹಾಗೂ ಚೆನ್ನಮ್ಮ ರಥದಲ್ಲಿ ನಡೆಯುವ ನಿರಂತರ ಧರಣಿ ದರ ನಿಗದಿ ಆಗುವವರೆಗೂ ಇರುತ್ತದೆ ಎಂದು ಹೋರಾಟ ನಿರತ ರೈತರು ತಿಳಿಸಿದ್ದಾರೆ. ಮಹಾಂತೇಶ್ ಕಾಮತ್, ಮಲ್ಲಿಕಾರ್ಜುನ್ ಹುಂಬಿ, ಬೀರಪ್ಪ ದೇಶನುರ, ಶಂಕರ ಮಾಡಲಗಿ, ಸುರೇಶ ಹಿಟ್ಟನಗಿ, ಹಾಗೂ ತಾಲೂಕಿನ ಕಬ್ಬು ಬೆಳೆಗಾರರು ರೈತರು ಉಪಸ್ಥಿತರಿದ್ದರು.

Post a Comment

0Comments

Post a Comment (0)