ರಾಜ್ಯದ ರೈತರ ಕಬ್ಬಿನ ದರ ನಿಗದಿಗೆ ಸಂಸದ ಜಗದೀಶ ಶೆಟ್ಟರ್ ಆಗ್ರಹ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ರಾಜ್ಯದ ರೈತರ ಕಬ್ಬಿನ ದರ ನಿಗದಿಗೆ ಸಂಸದ ಜಗದೀಶ ಶೆಟ್ಟರ್ ಆಗ್ರಹ 

ಬೇರೆ ರಾಜ್ಯದ ಮಾದರಿಯಲ್ಲಿ ಕಬ್ಬಿನ ದರವನ್ನು ನಿಗದಿಪಡಿಸುವ ಕುರಿತು ರೈತರು ರಾಜ್ಯದಲ್ಲಿ ಅನೇಕ ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ರಾಜ್ಯ ಸರಕಾರವು ಕೂಡಲೆ ಗಂಭೀರವಾಗಿ ಪರಿಗಣಿಸಿ, ಕಬ್ಬಿನ ದರವನ್ನು ನಿಗದಿಪಡಿಸಬೇಕು ಎಂದು ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳು ಶ್ರೀ ಜಗದೀಶ ಶೆಟ್ಟರ ಇವರು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಆಗ್ರಹಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಕಬ್ಬಿನ ದರ ಇತರೆ ರಾಜ್ಯದ ನೀಡುವ ಬೆಲೆಗೆ ಹೊಲಿಸಿದಾಗ ತುಂಬಾ ಕಡಿಮೆ ಇರುವ ಕಾರಣ ತಮಗೂ ಸಹ ಅದೆ ಮಾದರಿಯಲ್ಲಿ ಕಬ್ಬಿಗೆ ಬೆಲೆ ನಿಗದಿ ಪಡಿಸುವಂತೆ ಕಬ್ಬು ಬೆಳೆಗಾರರು ಆಗ್ರಹಿಸುತ್ತಾ ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರಾಜ್ಯ ಸರಕಾರವು ಇದರ ಬಗ್ಗೆ ಉದಾಸೀನತೆ ತೋರಿಸುತ್ತಿರುವುದು ಅತೀ ನೋವಿನ ಸಂಗತಿ ಎಂದು ಅವರು ತಮ್ಮ ಖೇದವನ್ನು ವ್ಯಕ್ತಪಡಿಸಿದ್ದಾರೆ.

ಕಬ್ಬು ಬೆಳೆಗಾರರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೆ ರಾಜ್ಯ ಸರಕಾರವು ಕಬ್ಬು ಕಾರ್ಖಾನೆಗಳ ಮಾಲಿಕರೊಂದಿಗೆ ಈ ವಿಷಯವಾಗಿ ಚರ್ಚೆ ನಡೆಸಿ, ಕಬ್ಬಿಗೆ ಇತರೆ ರಾಜ್ಯಗಳಲ್ಲಿ ಇರುವಂತೆಯೇ ನಮ್ಮ ರಾಜ್ಯದ ಕಬ್ಬು ಬೆಳೆಗಾರರಿಗೆ ಕಬ್ಬಿಗೆ ನೂತನ ದರ ನಿಗಧಿ ಪಡಿಸಿ, ಸಂತಸದ ಸುದ್ದಿಯನ್ನು ನೀಡುವ ಬಗ್ಗೆ ದಿಟ್ಟವಾದ ಹೆಜ್ಜೆಯನ್ನು ಇಡುವಂತೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ ಇವರು ರಾಜ್ಯ ಸರಕಾರವನ್ನು ಆಗ್ರಹಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)