*ಕರ್ನಾಟಕದ ಅಭಿವೃದ್ಧಿಗಾಗಿ ಕೆ ಆರ್ ಎಸ್ ಪಕ್ಷದ "ಎದ್ದೇಳು ಕನ್ನಡಿಗ" ಅಭಿಯಾನ.*
ಕಲಬುರ್ಗಿ:ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS) ಆಯೋಜಿಸಿದ್ದ "ಎದ್ದೇಳು ಕನ್ನಡಿಗ – ಸಮೃದ್ಧ ಕರ್ನಾಟಕ ಕಟ್ಟಲು, KRS ಪಕ್ಷ ಸೇರು ಬಾ" ಎಂಬ ಅಭಿಯಾನವು ಕಲಬುರ್ಗಿಯಲ್ಲಿ ಯಶಸ್ವಿಯಾಗಿ ನೆರವೇರಿತು.
ಈ ಅಭಿಯಾನಕ್ಕೆ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮೂಲಕ ಚಾಲನೆ ನೀಡಿ ಮಾತನಾಡಿದ ರಾಜ್ಯ ರಾಜ್ಯ ರೈತ ಘಟಕದ ಅಧ್ಯಕ್ಷ ಶ್ರೀ ಜೋಗನಹಳ್ಳಿ ಗುರುಮೂರ್ತಿ ಅವರು ಕಲಬುರ್ಗಿ ಜಿಲ್ಲೆಯ ಜನತೆ ಕೆ ಆರ್ ಎಸ್ ಪಕ್ಷಕ್ಕೆ ಸೇರುವ ಮೂಲಕ ಭ್ರಷ್ಟಾಚಾರ ಮುಕ್ತ,ಲಂಚಮುಕ್ತ ,ಮದ್ಯಪಾನ ಮುಕ್ತ ಕಲಬುರ್ಗಿಗೆ ಪಣತೊಟ್ಟು ಒಂದಾಗಬೇಕು ಪಕ್ಷದಲ್ಲಿ ಸೇರುವ ಮೂಲಕ ಜನ ಸಾಮಾನ್ಯರಿಗೆ ಬಿಪಿಎಲ್ ಕಾರ್ಡ್,ಪಿಂಚಣಿ,ಗೃಹಲಕ್ಷ್ಮೀ, ಸಬ್ಸಿಡಿ,ಸಾಲ,ಮನೆ ಮೊದಲಾದ ಕಲ್ಯಾಣ ಯೋಜನೆಗಳನ್ನು ಯಾವುದೇ ಲಂಚವಿಲ್ಲದೆ,ವಿಳಂಬವಿಲ್ಲದೆ ಪಡೆಯಲು ಸಹಾಯ ಮಾಡಬಹುದು.ಗ್ರಾಮ ಪಂಚಾಯತಿ, ನಾಡಕಚೇರಿ, ತಾಲ್ಲೂಕು ಕಚೇರಿ ಮತ್ತು ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತ ಒತ್ತಾಯಿಸುವ ಶಕ್ತಿಯನ್ನು ಪಡೆಯಬಹುದು ಎಂದು ತಿಳಿಸಿದರು.
ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಅವರು ಮಾತನಾಡಿ ಪಕ್ಷವು ರೈತರಿಗೆ ರಸಗೊಬ್ಬರ,ಸಬ್ಸಿಡಿ, ಬೆಳೆಪರಿಹಾರ,ಟಿಸಿ,ಭೂಮಿ ಪರಿಹಾರ ಮೊದಲಾದ ಸಮಸ್ಯೆಗಳಿಗೆ ನಿಜವಾದ ಪರಿಹಾರ ಒದಗಿಸುತ್ತದೆ. ಗ್ರಾಮ,ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳನ್ನು ಪಕ್ಷದ ಶಕ್ತಿಯಿಂದ ಮುನ್ನಡೆಸಬಹುದು ಎಂದು ತಿಳಿಸಿದರು
ರಾಜಪುರ ರಿಂಗ್ ರಸ್ತೆಯಿಂದ ವೃತ್ತದಿಂದ ಆರಂಭಗೊಂಡ ಈ ಜಾಥಾ,ಶಹಾಬಾದ್ ರಸ್ತೆ,ರಾಮಮಂದಿರ,ಕೇಂದ್ರ ಬಸ್ ನಿಲ್ದಾಣ,ತಿಮ್ಮಾಪುರ ಸರ್ಕಲ್,ಅನ್ನಪೂರ್ಣ ಕ್ರಾಸ್, ಜಗತ್ ಸರ್ಕಲ್, ಕಲಬುರ್ಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಭಿಯಾನದ ಗುರಿ ಉದ್ದೇಶಗಳನ್ನು ನಗರದ ಜನರಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಗಣಪತಿ ರಾಠೋಡ್,ಜಿಲ್ಲಾಧ್ಯಕ್ಷರಾದ ಸಿದ್ಧಾರ್ಥ್ ಮೀಸೆ,ಉಪಾಧ್ಯಕ್ಷರಾದ ಕ್ರಿಸ್ಟೋಫರ್ ಚಟ್ನಳ್ಳಿ,ಪ್ರಧಾನ ಕಾರ್ಯದರ್ಶಿ ಫೀನಿಕ್ಸ್ ಶರಣಪ್ಪ,ಗೌರವಾಧ್ಯಕ್ಷ ಶಿವಪುತ್ರ ಗರೂರ,ರಿಯಾಝ್ ಸಾಬ್,ಮೋಶಿನ್ ಪಟೇಲ್,ಬಸವರಾಜ ನಾಯಕೋಡಿ,ನೀಲಕಂಠ ಗೊಳ್ಳಾಕೆ,ವೀರೇಶ್ ಗೊಳ್ಳಾಕೆ, ರಾಮು ಚನ್ನೂರು,ಮೌನೇಶ್ವರ,ಸೇರಿದಂತೆ ಜಿಲ್ಲಾ ನಾಯಕರು ಹಾಗೂ ವಿವಿಧ ತಾಲೂಕುಗಳ ಪದಾಧಿಕಾರಿಗಳು ಹಾಗೂ ಸೈನಿಕರು ಹಾಜರಿದ್ದರು.