ಅಂಬಿಗರ ಚೌಡಯ್ಯ ಮೂರ್ತಿ ಭಗ್ನ ಖಂಡಿಸಿ ಪ್ರತಿಭಟನೆ ಬೈಲಹೊಂಗಲ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
  
*ಬೈಲಹೊಂಗಲ* ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನವರ ಮೂರ್ತಿಗೆ ಗೌರವ ಸಮರ್ಪಿಸಿ, ನಿಜಶರಣ ಅಂಬಿಗರ ಚೌಡಯ್ಯನವರಿಗೆ ಜೈಕಾರದ ಘೋಷಣೆ ಕೂಗೂತ್ತ ತಹಶೀಲ್ದಾರ, ಎಸಿ ಕಚೇರಿ ವರಗೆ ಪ್ರತಿಭಟಣಾ ಮೆರವಣಿಗೆ ನಡೆಸಿ, ತಹಶೀಲ್ದಾರ ಕಚೇರಿ‌ ಮುಂಭಾಗದಲ್ಲಿ ಪ್ರತಿಭಟಣಾ ಧರಣಿ ನಡೆಸಿ, ಮನವಿ ಅರ್ಪಿಸಲಾಯಿತು.
ಗಂಗಾಮತಸ್ಥ ಸಮಾಜದ ಉಪವಿಭಾಗದ ಅಧ್ಯಕ್ಷ ಮಲ್ಲಪ್ಪ ಮುರಗೋಡ ಮಾತನಾಡಿ, ಸಮಾಜ ಸುಧಾರಣೆಗೆ ಬಸವಾದಿ ಶರಣರಲ್ಲಿ ಪ್ರಮುಖರಾದ ನಿಜ ಶರಣ ಅಂಬಿಗರ ಚೌಡಯ್ಯನವರು ತಮ್ಮ ಮೊಣಚಾದ ವಚನಗಳ ಮೂಲಕ ಶ್ರಮಿಸಿದ್ದಾರೆ. 

ಅಂಬಿಗರ, ಗಂಗಾಮತಸ್ಥ ಸಮಾಜದ ಕುಲ ಗುರುಗಳ ಮೂರ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಘಟಣೆ ಮರುಕಳಿಸದಂತೆ ಸರಕಾರ‌ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪತ್ರಕರ್ತ ಬಸವರಾಜ ಕಲಾದಗಿ ಮಾತನಾಡಿ, ಸಮಾಜಗಳ ಧರ್ಮಗುರುಗಳಿಗೆ ಅಪಮಾನ ಮಾಡುತ್ತಿರುವ ಘಟಣೆಗಳು ಮೇಲಿಂದ ಮೇಲೆ ನಡೆದು ಶಾಂತಿಯುತ ಜೀವನಕ್ಕೆ ಭಂಗ ಉಂಟಾಗುತ್ತಿದೆ. ಸಮಾಜ ಸರಿ ದಾರಿಯಲ್ಲಿ ನಡದು, ಶಾಂತಿಯಿತ ಜೀವನ ನಡೆಸಲು ಶ್ರಮಿಸಿದ ಕುಲಗುರು ಅಂಬಿಗರ ಚೌಡಯ್ಯನವರ‌ ಕೊಡುಗೆ ಅಪಾರವಾಗಿದೆ. ಅವರ
 ಮೂರ್ತಿಗೆ ಭಂಗ ಮಾಡಿ ಶಾಂತಿ ಕದಡುವ ಕೆಲಸ ಮಹಾ ಅಪರಾಧವಾಗಿದೆ. ರಾಜ್ಯಾದ್ಯಂತ ಸಮಾಜ ಬಾಂಧವರು ಸಿಡಿದೆದ್ದು, ಪ್ರತಿಭಟಿಸು ಮೊದಲೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ನಿವೃತ್ತ ತಹಶೀಲ್ದಾರ ರುದ್ರಪ್ಪ ಶಿವಬಸನ್ನವರ, ಗುರುಬಸಪ್ಪ ಸಣ್ಣಮನಿ, 
 ಬಿ.ವಾಯ್. ಪೂಜೇರ, ಬಸಪ್ಪ ಗೋಣಿ, ಬಸವರಾಜ ಪೂಜಾರ, ರಮೇಶ ಉಳ್ಳಿಗೇರಿ, ಸುಭಾಶ ಜಂಬಗಿ, ಶ್ರೀಶೈಲ ಹೋಳಿ, ಮಡಿವಾಳಪ್ಪ ಹೊಸಮನಿ, ಪ್ರಶಾಂತ ಢಾಂಗೆ, ಶಿವು ಬಡವಣ್ಣವರ, ಉಡಚಪ್ಪ ಸಂಕಣ್ಣವರ, ಸಚಿನ ಪೂಜಾರ, ಮಹಾದೇವ ಮಾರಿಹಾಳ, ಭೀಮಪ್ಪ ಕರದೇಮನ್ನವರ, ರವಿ ಮುರಗೋಡ, ಮಲ್ಲೇಶ ಪೂಜಾರ, ಕಿರಣ ಶಿವಬಸಣ್ಣವರ, ಯಲ್ಲಪ್ಪ ಅಮ್ಮಿನಭಾಂವಿ ಬಸವರಾಜ್ ದೇಶನೂರ ಹಾಗೂ ಅನೇಕರು ಇದ್ದರು.

Post a Comment

0Comments

Post a Comment (0)