“ನರೇಗಾ ಕೂಲಿಕಾರರು ಇ-ಕೆವೈಸಿ ಮಾಡಿಸಿಕೊಳ್ಳಿ”- ವಿಜಯ ಪಾಟೀಲ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅರ್ಹ ನೊಂದಾಯಿತ ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡುವ ಮೂಲಕ ಪ್ರತಿ ಆರ್ಥಿಕ ವರ್ಷಕ್ಕೆ 100 ದಿವಸ ಕೂಲಿ ಕೆಲಸವನ್ನು ನೀಡಿ ಪ್ರತಿ ದಿನ 370/- ರೂಗಳ ಕೂಲಿ ಪಾವತಿ ಮಾಡುವ ಮೂಲಕ ಕುಟುಂಬವನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸದೃಡರನ್ನಾಗಿಸುವ ಸಲುವಾಗಿ ಇದ್ದೂರಲ್ಲೇ ಉದ್ಯೋಗವನ್ನು ನೀಡುವುದಾಗಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ, ಎಲ್ಲಾ ಉದ್ಯೋಗ ಚೀಟಿ ಹೊಂದಿರುವ ಕ್ರಿಯಾ ಶೀಲ ಕುಟಂಬಗಳಿಗೆ ಎನ್ ಎಮ್ ಎಮ್ ಎಸ್ ಆಪ್ ಆದಾರಿತ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ ಎಂದು ವಿಜಯ ಪಾಟೀಲ ಸಹಾಯಕ ನಿರ್ದೇಶಕರು (ಗ್ರಾ.ಉ) ಪ್ರಾಯೋಗಿವಾಗಿ ಇ-ಕೆವೈಸಿಯನ್ನು ಮಾಡಿ ಕರೆ ನೀಡಿದರು.
ಬೈಲಹೊಂಗಲ ತಾಲೂಕಿನಲ್ಲಿ ಒಟ್ಟು 34 ಗ್ರಾಮ ಪಂಚಾಯತಗಳಿದ್ದು ಅದರಲ್ಲಿ ಕ್ರಿಯಾ ಶೀಲ ಉದ್ಯೋಗ ಚೀಟಿ ಹೊಂದಿರುವ ಒಟ್ಟು ಕುಟುಂಬಗಳು 39797 ಇದರಲ್ಲಿ ಈಗಾಗಲೇ ಇ-ಕೆವೈಸಿ ಮಾಡಿಸಿಕೊಂಡಿರುವ ಕುಟುಂಬಗಳು 20342 ಪ್ರತಿಶತ (ಶೇ 51.11) ರಷ್ಟು ಆಗಿದೆ ಬಾಕಿ 18900 ಕುಟುಂಬಗಳು ಈ ಕೂಡಲೇ ಕೆವೈಸಿ ಮಾಡಿಸಿಕೊಳ್ಳಲು ಸಲಹೆ ನೀಡಿದರು.
ಗ್ರಾಮ ಪಂಚಾಯತ ಸಂಗೊಳ್ಳಿ, ಪಟ್ಟಿಹಾಳ ಕೆ ಬಿ ಮತ್ತು ಬೆಳವಡಿ ಗೆ ಭೇಟಿ ನೀಡಿ ಗ್ರಾಮದ ಮನೆ ಮನೆಗೆ ಗ್ರಾಪಂ ಸಿಬ್ಬಂದಿಗಳು ತೇರಳಿ ಇ-ಕೆವೈಸಿ ಮಾಡುತ್ತಿರುವ ಸಿಬ್ಬಂದಿಗಳು ಮತ್ತು ನರೇಗಾ ಕೂಲಿಕಾರರು ಸಹಕಾರದಿಂದ ನಿಗದಿತ ಸಮಯದಲ್ಲಿ ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಅಡಿವೆಪ್ಪ ತಳವಾರ, ತಾಪಂ ಐಇಸಿ ಸಂಯೋಜಕ ಎಸ್ ವ್ಹಿ ಹಿರೇಮಠ, ಗ್ರಾಪಂ ಸದಸ್ಯರು ಬಸವರಾಜ ಕೊಡ್ಲಿ, ಗ್ರಾಪಂ ಕಾರ್ಯದರ್ಶಿ ಪ್ರಭು ನರಗಟ್ಟಿ, ಗ್ರಾಪಂ ಸಿಬ್ಬಂದಿಗಳು ಬಸನಗೌಡ ಅಗಸಿಮನಿ, ಸಿದ್ದಪ್ಪ ಗಣಾಚಾರಿ, ಗ್ರಾಮ ಕಾಯಕ ಮಿತ್ರ ಮಂಜುಳಾ ಹುಬ್ಬಳ್ಳಿ ಮತ್ತು ಕೂಲಿಕಾರರು ಹಾಜರಿದ್ದರು.