ರೈತರಿಂದ ಭೂತಾಯಿಗೆ ಉಡಿ ತುಂಬಿ ಪೂಜೆ ಸಲ್ಲಿಸಿ ಶೀಗಿ ಹುಣ್ಣಿಮೆ ಆಚರಣೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ರೈತ ಬಾಂಧವರು ಶೀಗಿ ಹುಣ್ಣಿಮೆಯನ್ನು ಭೂಮಿ ತಾಯಿಗೆ ಉಡಿ ತುಂಬಿ ಪೂಜೆ ಸಲ್ಲಿಸುವುದರ ಮುಖಾಂತರ ಮುಂಬರುವ ದಿನಗಳಲ್ಲಿ ನಮಗೆ ಚೆನ್ನಾಗಿ ಬೆಳೆಯನ್ನು ನೀಡಲೆಂದು ಪ್ರಾರ್ಥಿಸಿದರು.
ದಸರಾ ಮುಗಿಯುತ್ತಿದ್ದಂತೆ ಬರುವ ಈ ಹಬ್ಬವನ್ನು ರೈತರು ಭಕ್ತಿ ಮತ್ತು ಸಡಗರದಿಂದ ಆಚರಿಸಿದರು. ಮುಂಗಾರು ಬೆಳೆಗಳು ಸಿದ್ಧವಾಗುವ ಈ ಸಮಯದಲ್ಲಿ ರೈತರು ತಮಗೆ ಸಮೃದ್ಧಿ ನೀಡಿದ ಭೂತಾಯಿಗೆ ಕೃತಜ್ಞತೆ ಸಲ್ಲಿಸುತ್ತಿದ್ದು ಕಂಡು ಬಂತು. 
ಬೆಳಿಗ್ಗೆಯಿಂದಲೇ ರೈತರು ತಮ್ಮ ತಮ್ಮ ಜಮೀನುಗಳಿಗೆ ಮನೆಯ ಕುಟುಂಬದ ಸದಸ್ಯರೆಲ್ಲರೂ ಸೇರಿ ನಾನಾ ತರದ ಅಡುಗೆಗಳನ್ನು ತಯಾರಿ ಮಾಡಿಕೊಂಡು ಹಾಗೂ ಸ್ನೇಹಿತರನ್ನು ಬಂಧು ಬಳಗ ಕರೆದುಕೊಂಡು ಜಮೀನಿಗೆ ಹೋಗಿ ಬನ್ನಿ ಮರದ ಕೆಳಗೆ ಐದು ಕಲ್ಲುಗಳನ್ನು ಇಟ್ಟು ಅವುಗಳನ್ನು ಪಂಚ ಪಾಂಡವರು ಎಂದು ಭಾವಿಸಿ ಪೂಜಿಸಿದರು.
 ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಸಿಹಿ ತಿನಿಸು ನವನೆ ಅಕ್ಕಿಯನ್ನು ಹುರಿದು ಹಿಟ್ಟನ್ನು ತಯಾರಿಸಿ ಬೆಲ್ಲವನ್ನು ಸೇರಿಸಿ ತಯಾರಿಸಿದ ಹೋಳಿಗೆ, ಪುಂಡಿ ಪಲ್ಯ, ವಿವಿಧ ತರದ ಚಟ್ನಿಗಳು, ಕಡಬು ಹಾಗೂ ವಡೆ ಮತ್ತು ಐದು ತರಹದ ಕಾಳುಗಳಿಂದ ತಯಾರಿಸಿದ ಅಡುಗೆಯನ್ನು ತಯಾರಿಸಿ ಭೂಮಿಗೆ ನೈವೇದ್ಯ ಮಾಡಿ ಕುಟುಂಬದ ಸದಸ್ಯರೆಲ್ಲರೂ ಸೇರಿ ಸಾಮೂಹಿಕ ಭೋಜನವನ್ನು ಸವಿದರು.

Post a Comment

0Comments

Post a Comment (0)