ಕೆಳದಿ ಹಿರೇಮಠದ ಷ,ಬ್ರ ಬಸವಲಿಂಗ ಶಿವಾಚಾರ್ಯರಿಗೆ ಗುರು ಪೂರ್ಣಿಮೆ ನಿಮಿತ್ತ ಪಾದಪೂಜೆ ನೆರವೇರಿಸಲಾಯಿತು.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನೇಸರಗಿ:ಇಡೀ ದೇಶಾದ್ಯಂತ ಗುರು ಪೌರ್ಣಮಿ ವಿಶೇಷವಾಗಿ ಆಚರಣೆ ಮಾಡಲಾಯಿತು. ಅದರಲ್ಲೂ ಸದ್ಭಕ್ತರೆಲ್ಲರೂ ಗುರುವಿನ ಪಾದ ಹಿಡಿದು ನಮಿಸುವ ಸಂಗತಿಗಳು ಕೂಡ ನಡೆದವು. ದೇಶದಲ್ಲೇಡೆ ಅದರಲ್ಲೂ ದಕ್ಷಿಣೆ ಭಾರತದಲ್ಲಿ ಶ್ರೀ ಗುರು ರಾಘವೇಂದ್ರ ದೇವಸ್ಥಾನಗಳು ಹಾಗೂ ಶಿರಡಿ ಸಾಯಿಬಾಬಾ ದೇವಸ್ಥಾನಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಗುರುವಿನ ಪೂಜೆಯಲ್ಲಿ ಭಾಗವಹಿಸಿ ದರ್ಶನ ಪಡೆದು ಪುನೀತರಾದರು ಅದರಲ್ಲೂ ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಸಮೀಪದ ಹಣ ಬರಹಟ್ಟಿ ಗ್ರಾಮದ  ಭಕ್ತರು ಗುರು ಪೌರ್ಣಮಿಯ ವಿಶೇಷ ದಿನದಂದು ಇಲ್ಲಿಯ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಪರಮಪೂಜ್ಯ ಬಸವಲಿಂಗ ಶಿವಾಚಾರ್ಯ ಪರಮಪೂಜ್ಯ   ಸ್ವಾಮೀಜಿಗಳಿಗೆ ಸತ್ಕರಿಸಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಹಾಗೂ ಬಿಡಿಸಿಸಿ ಬ್ಯಾಂಕ್ ನಲ್ಲಿ ನಿರ್ದೇಶಕರಾದ ಮಹಾಂತೇಶ್ ದೊಡ್ಡ ಗೌಡರ್ ಮತ್ತು ಭಾರತೀಯ ಜನತಾ ಪಕ್ಷದ ಮಂಡಲ ಅಧ್ಯಕ್ಷ ಶ್ರೀಕರ ಕುಲಕರ್ಣಿ ಬಿಜೆಪಿಯ ಮುಖಂಡರು ಸೇರಿದಂತೆ ಹಣಬರಟ್ಟಿ ಹಿರೇಮಠದ ಗ್ರಾಮದ ಪೂಜ್ಯರಿಗೆ ಸತ್ಕರಿಸಿ ಆಶೀರ್ವಾದ ಪಡೆದರು ಇನ್ನೂ ಸುತಗಟ್ಟಿ ಗ್ರಾಮದ ಭಕ್ತರು ಪಟ್ಟದ ದೇವರನ್ನು ಸತ್ಕರಿಸಿ ಅವರ ಆಶೀರ್ವಾದವನ್ನು ಪಡೆದರು ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಎಸ್ಎಮ್ ಪಾಟೀಲ್ ಮಲ್ಲಿಕಾರ್ಜುನ ತುಬಾಕಿ ಶ್ರೀಶೈಲ ಕಮತಗಿ ಅರವಿರಾಜ ಪಿನಾಮದ ಸಂತೋಷ್ ಗೋವಿ ಸಿದ್ದು ಬೋಳ್ನ್ನವರ್ ಮಹಾಂತೇಶ್ ಮೊಹರೆ ಅಡಿವೆಪ್ಪ ಹೊಸಮನಿ ಸಿದ್ದನಗೌಡ ಗೌಡ ಗೌಡ ಸೇರಿದಂತೆ ಗ್ರಾಮದ ಹಿರಿಯರು ಮಕ್ಕಳು ಮಹಿಳೆಯರು ಸೇರಿದಂತೆ ಅನೇಕರು ಕೂಡ ಉಪಸ್ಥಿತಿ ಇದ್ದರು ಈ ಸಂದರ್ಭದಲ್ಲಿ ಸ್ವಾಮೀಜಿಗಳು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು ಭಗವಂತ ಇಡೀ ಗ್ರಾಮಕ್ಕೆ ಒಳ್ಳೆಯದು ಮಾಡಲಿ ಎಲ್ಲರಿಗೂ ಕೂಡ ಒಳ್ಳೆಯದಾಗಲಿ ಎಂದು ಈ ಸಂದರ್ಭದಲ್ಲಿ ತಮ್ಮ ಶುಭನುಡಿಯನ್ನು ನುಡಿದರು.

Post a Comment

0Comments

Post a Comment (0)