ಬೈಲಹೊಂಗಲ: ಗುರು ಪೂರ್ಣಿಮೆ ನಿಮಿತ್ತ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ತಾಲೂಕಿನ ದೊಡವಾಡ, ಬುಡರಕಟ್ಟಿ, ಗೋವನಕೊಪ್ಪ, ಚಿಕ್ಕಬೆಳ್ಳಿಕಟ್ಟಿ, ಏಣಗಿ, ಲಿಂಗದಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಮಠ ಮಂದಿರಗಳಿಗೆ ಗುರುವಾರ ಭೇಟಿ ನೀಡಿ ಅಲ್ಲಿನ ಪೂಜ್ಯರ ಆಶಿರ್ವಾದ ಪಡೆದರು.
ದೊಡವಾಡ ಗ್ರಾಮದ ಹಿರೇಮಠದ ಪೀಠಾಧಿಪತಿ ಶ್ರೀ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿಯವರನ್ನು ತಮ್ಮ ಬೆಂಬಲಿಗರೊಂದಿಗೆ ಭೇಟಿ ಮಾಡಿ ಶ್ರೀಗಳನ್ನು ಸನ್ಮಾನಿಸಿ ಗೌರವಿಸಿ ಅವರ ಆರ್ಶೀವಾದ ಪಡೆದರು.