ಬೈಲಹೊಂಗಲ: ತಾಲೂಕಿನ ಬೆಳವಡಿ ಗ್ರಾಮದ ಶಕ್ತಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂಕಲ್ಪ ಸಿದ್ದಿ ಶ್ರೀ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ಕರಿಯಮ್ಮದೇವಿ ಮೂರ್ತಿ ಹಾಗೂ ಶಿಖರ ಕಳಶ ಪ್ರತಿಷ್ಟಾಪನೆ ಸಮಾರಂಭ ಅದ್ದೂರಿಯಿಂದ ಜರುಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ವಿಶಿಷ್ಠ ಸಂಪ್ರದಾಯ ಸಂಸ್ಕಾರ ಪಾಲನೆಯಿಂದ ನಮ್ಮ ಭಾರತ ದೇಶ ಇಡೀ ಜಗತ್ತಿಗೆ ಮಾದರಿಯಾಗಿದೆ. ನಮ್ಮಲ್ಲಿರುವ ಮಠ ಮಂದಿರಗಳು ವಿವಿಧ ರೀತಿಯ ಜನಸೇವಾ ಕಾರ್ಯಗಳಿಂದ ಭಾರತದ ಸನಾತನ ಹಿಂದೂ ಧರ್ಮವನ್ನು ಶ್ರೀಮಂತಗೊಳಿಸಿವೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಕಾರಿಮನಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಸಾನಿನಿಧ್ಯ ವಹಿಸಿದ್ದ ಉಪ್ಪಿನ ಬೆಟಗೇರಿ ವಿರಕ್ತಮಠದ ಶ್ರೀ ಕುಮಾರ ವಿರುಪಾಕ್ಷ ಸ್ವಾಮಿಜಿ, ಮಲ್ಲಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು.