ಬೈಲಹೊಂಗಲ. ತಾಲೂಕಿನ ನೇಸರಗಿ ಗ್ರಾಮದ ಪ್ರತಿಷ್ಠಿತ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ
ಬುಧವಾರದಂದು ಬೆಳಿಗ್ಗೆ 8 ಘಂಟೆಗೆ ಹಣಬರಹಟ್ಟಿ ಗ್ರಾಮದ ಹಿರೇಮಠದ ಷ ಭ್ರ. ಬಸವಲಿಂಗ ಶಿವಾಚಾರ್ಯರು ಹಾಗೂ ನೇಸರಗಿ ಮಲ್ಲಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ 26 ಜನರಿಗೆ ಡಾ. ಎಸ್ ಬಿ ಗೆಜ್ಜಿ ಹಾಗೂ ಪಾರಿವಾರದಿಂದ ನಡೆಸಿಕೊಡುವ ಸಾಮೂಹಿಕ ಉಚಿತ ರವಿ ಗುಗ್ಗಳೋತ್ಸವವು ವಿಧಿ ವಿಧಾನಗಳಿಂದ ಪೂಜೆ ನೆರವೇರಿಸುವದರ ಮೂಲಕ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗೋಕಾಕ ತಾಲೂಕಿನ ಕಲ್ಲೋಳಿ ಗ್ರಾಮದ ಹಾಗೂ ನೇಸರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಉಡಗಿ ಪುರವಂತರಿಂದ ಹಾಗೂ ಜೈ ಹನುಮಾನ ಸಂಬಾಳ ಅವರಿಂದ ಒಡಪು, ವೀರಗಾಸೆ, ಕುಣಿತದ ವಿಶೇಷ ಕಾರ್ಯಕ್ರಮಗಳು, ಗೊಂಬೆ ಕುಣಿತ ಅದ್ದೂರಿಯಾಗಿ ಮೆರವಣಿಗೆ ನೆರವೇರಿತು.ಪೇಟೆ ಓಣಿ ಮೂಲಕ ಕರ್ನಾಟಕ ಚೌಕ ಗೆ ಆಗಮಿಸಿ ವಿನೂತನ ಹಿರಿಯ, ವಯಸ್ಕ, ಚಿಕ್ಕ ಮಕ್ಕಳಿಂದ ಒಡಪು, ವೀರಗಾಸೆ, ಕುಣಿತ ಕಾರ್ಯಕ್ರಮ ಜನಮನ ಸೆಳೆದು, ಭಕ್ತಿ ಭಾವದಲ್ಲಿ ಕಾರ್ಯಕ್ರಮ ನೆರವೇರಿತು.ಈ ಸಂದರ್ಭದಲ್ಲಿ ನೇಸರಗಿ ಗ್ರಾಮಸ್ಥರು, ಹಾಗೂ ಬೇರೆ ಊರುಗಳಿಂದ 26 ಜನ ಗುಗ್ಗಳ ತೀರಿಸಿದ ಸಂಬಂದಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.