ಬೈಲಹೊಂಗಲ: ಕಾನೂನು – ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಮುಂಜಾಗ್ರತ ಕ್ರಮವಾಗಿ ಬೈಲಹೊಂಗಲ ಪಟ್ಟಣದಲ್ಲಿ ಶನಿವಾರ ಬೆಳ್ಳಮ ಬೆಳಿಗ್ಗೆ ಪೊಲೀಸ್ ರು ರೌಡಿ ಶಿಟರಗಳ ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಡಿ ವೈ ಎಸ್ ಪಿ ಡಾ. ವೀರಯ್ಯ ಹಿರೇಮಠ, ಸಿಪಿಐ ಪಿ ಎ ಸಾಲಿಮಠ ಅವರುಗಳ ನೇತೃತ್ವದಲ್ಲಿ, ಪಿ ಎಸ್ ಐಗಳಾದ ಎಫ್ ವೈ ಮಲ್ಲೂರ, ಪಿ ವೈ ವಾಲಿಕಾರ ಹಾಗೂ ಸಿಬ್ಬಂದಿಗಳು ರೌಡಿ ಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆಸಿ, ಮಾರ ಕಾಸ್ತ್ರಗಳ ತಪಾಸಣೆ ನಡೆಸಿದ ಪೊಲೀಸರು ಇಂಚಿಂಚೂ ಜಾಲಾಡಿದ್ದಾರೆ.
ಪೊಲೀಸರ ದಾಳಿಯಿಂದ ನಿದ್ದೆ ಗುಂಗಿನಲ್ಲಿದ್ದ ರೌಡಿಶೀಟರ್ ಗಳು ಹಾಗೂ ಅವರ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಬೈಲಹೊಂಗಲ ಪಟ್ಟಣದ ಸುಮಾರು ಸುಮಾರು 20 ಕ್ಕಿಂತ ಹೆಚ್ಚು ರೌಡಿಶೀಟರ್ ಗಳ ಮನೆಗಳಲ್ಲಿ ಪೊಲೀಸರು ಶೋಧ ನಡೆಸಿದರು.