ಕಿತ್ತೂರು ಉತ್ಸವದ ಜ್ಯೋತಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ ಯರಗಟ್ಟಿ ಜನತೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
20-10-2024
ಯರಗಟ್ಟಿ ಸುದ್ದಿ

 *ಕಿತ್ತೂರು ಉತ್ಸವದ ಜ್ಯೋತಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ ಯರಗಟ್ಟಿ ಜನತೆ* 


 *ಯರಗಟ್ಟಿ:* ದಿ-23 ರಿಂದ 25ರ ವರೆಗೆ ಜರುಗುವ ಕಿತ್ತೂರು 200ನೇ ವಿಜಯೋತ್ಸವ ಅಂಗವಾಗಿ ಇಂದು ಯರಗಟ್ಟಿ ಪಟ್ಟಣದ ಸಂಗೋಳ್ಳಿ ರಾಯಣ್ಣನ ವೃತ್ತದಲ್ಲಿ ಕಿತ್ತೂರು ಉತ್ಸವದ ಜ್ಯೋತಿಯನ್ನು ಕುಂಬ ಮೇಳದೊಂದಿಗೆ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.

ವೀರ ಜ್ಯೋತಿಗೆ ಯರಗಟ್ಟಿ ತಾಲೂಕಾ ತಹಶೀಲ್ದಾರ ಎಮ್ ಎನ್ ಮಠದ ಅವರು ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷರಾದ ಅಜೀತಕುಮಾರ ದೇಸಾಯಿ,ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ದೇಸಾಯಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ ಎನ್ ತಹಶೀಲ್ದಾರ, ಮತ್ತು ನಾಮ ನಿರ್ದೇಶಿತ ಸದಸ್ಯರು ತಾಲೂಕು ಕರವೇ ಅಧ್ಯಕ್ಷ ಡಿ ಕೆ ರಫಿಕ್, ತಾಲೂಕು ಕಸಾಪ ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ, ಪಟ್ಟಣದ ಗುರು ಹಿರಿಯರು ಹಲವಾರು ಸಂಘಟನೆಯವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
(ವರದಿ ಚನ್ನಪ್ಪ ಎಸ್ ಪಣದಿ)

Post a Comment

0Comments

Post a Comment (0)