*ಬೈಲಹೊಂಗಲ ಬ್ರೇಕಿಂಗ್ ನ್ಯೂಸ್...*
ಬೈಲಹೊಂಗಲದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನ ಉತ್ಸವವನ್ನು ಒಂದು ದಿನದ ಮಟ್ಟಿಗೆ ನಡೆಸಬೇಕೆಂದು ಹೋರಾಟಗಾರರು, ನ್ಯಾಯವಾದಿಗಳು ಹಾಗೂ ಎಲ್ಲ ಸಂಘಟನೆಗಳ ಪರವಾಗಿ ಮೂರು ಸಾವಿರ ಮಠದಲ್ಲಿ ಪ್ರಭು ನೀಲಕಂಠ ಶ್ರೀಗಳ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಗಿತ್ತು ಸಭೆಯಲ್ಲಿ ನಾಳೆ ಸೋಮವಾರ 21ರಂದು ಬೈಲಹೊಂಗಲ ಬಂದ್ ಕರೆಗೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು, ಇಂದು ಈ ಹಿನ್ನಲೆಯಲ್ಲಿ ಮಾನ್ಯ ಉಪ ವಿಭಾಗ ಅಧಿಕಾರಿಗಳ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿದ್ದು ಈ ಸಭೆಯಲ್ಲಿ ನಾಳೆ ಹಮ್ಮಿಕೊಂಡ ಬಂದ್ ಕರೆಯನ್ನು ವಾಪಸ್ ಪಡೆಯಲಾಗಿದ್ದು ನಾಡಿನ ಎಲ್ಲ ಜನರ ಇಚ್ಛೆಯಂತೆ ಬೈಲಹೊಂಗಲ ಶಾಸಕರು ಮಹಾಂತೇಶ ಕೌಜಲಗಿ ಅವರು ಈ ಉತ್ಸವಕ್ಕೆ ಹಸಿರು ನಿಶಾನೆ ತೋರಿದ್ದು ಎಲ್ಲರ ಒಪ್ಪಿಗೆ ಮೇರೆಗೆ ಬಂದ್ ಹಿಂಪಡೆದಿದ್ದು ನಾಳೆ ಎಂದಿನಂತೆ ಬೈಲಹೊಂಗಲ ವಹಿವಾಟು ಇರಲಿದೆ ಎಂದು ತಿಳಿಸಲಾಗಿದೆ.