*ಚಾಲಕರ ಸ್ವಾಭಿಮಾನಕ್ಕೆ ದಕ್ಕೆಯಾಗದರೆ ಪಿಎಮ್ ಕಾರು ಸಹಿತ ಮುಂದೆ ಹೊಗಲ್ಲಾ, ಶ್ರೀ ಅಮೃತೇಶ*
ಸಭೆಯನ್ನು ದೀಪ ಬೆಳಗಿಸುವ ಮುಖೇನ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀ ಅಮೃತೇಶ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈಗಿನ ದಿನಗಳಲ್ಲಿ ಮಧ್ಯವರ್ತಿಗಳು ಹೆಚ್ಚಾಗುತ್ತಿದ್ದು ಅವರು ಕಮಿಷನ್ ತೆಗೆದುಕೊಂಡು ಶ್ರೀಮಂತರಾಗುತಿದ್ದಾರೆ ಆದರೆ ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ದುಡಿಯುತ್ತಿರುವ ವಾಹನ ಚಾಲಕರು ಮಾತ್ರ ಬಡವರಾಗಿ ಉಳಿದು ಮಾಡಿದ ಸಾಲವನ್ನು ಬರಿಸಲಾಗದೆ ಒದ್ದಾಡುವ ಪರಿಸ್ಥಿತಿ ಎದುರಾಗಿದೆ. ಏಜೆಂಟರು ಎಸಿ ಆಫೀಸಿನಲ್ಲಿ ಕುಳಿತು ಕಂಪ್ಯೂಟರ್ ಮೇಲೆ ಬೆರಳು ಆಡಿಸುತ್ತಾ ಹಣ ಸಂಪಾದನೆ ಮಾಡುತ್ತಿದ್ದಾರೆ, ಓಲಾ,ಉಬರನಂತಹ ಕಂಪನಿಗಳು ಹುಟ್ಟಿಕೊಂಡು ದಿನದಿಂದ ದಿನಕ್ಕೆ ಅವರು ಬೆಳೆಯುತ್ತಿದ್ದಾರೆ. ಹೊರತು 100 200 ತೆಗೆದುಕೊಂಡು ಬಂದಂತಹ ಹಣದಲ್ಲಿ ಜೀವನ ಕಟ್ಟಿಕೊಳ್ಳುವುದು ಚಾಲಕರ ದುಶ್ಸಂಗತಿಯಾಗಿದೆ. ಬೆಂಗಳೂರು ಮೈಸೂರು ಸೇರಿದಂತೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಈ ಏಜೆಂಟ್ ಕಂಪನಿಗಳು ಬೇರು ಬಿಟ್ಟಿವೆ. ಆದರೆ ನಾವು ನೀವೆಲ್ಲ ಹೀಗೆ ಸುಮ್ಮನೆ ಕೂಳಿತುಕೊಂಡರೆ ಒಂದಾನೊಂದು ದಿನ ಬೆಳಗಾವಿ ಜಿಲ್ಲೆಯಲ್ಲಿ ಕೂಡ ಇನ್ನೂ ನಾನಾ ತರಹದ ಕಂಪನಿಗಳು ಆವರಿಸಿಕೊಳ್ಳಬಹುದು ತಕ್ಷಣವೇ ಇಂದಿನಿಂದಲೇ ತಾವೆಲ್ಲರೂ ಎಚ್ಚೆತ್ತುಕೊಂಡ ಸಂಘದ ಸದಸ್ಯರಾಗಿ ಒಟ್ಟುಗೂಡಿ ಬಹಿಷ್ಕಾರ ಮಾಡಬೇಕೆಂದು ಹೇಳಿದರು.
ನಂತರ ಮಾತನಾಡಿದ ರಾಜ್ಯಾಧ್ಯಕ್ಷ ಶ್ರೀ ಜಯನ್ನನವರು ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಭಾರತ್ ಟ್ರಾನ್ಸ್ಪೋರ್ಟ್ ಸಂಘಟನೆಯನ್ನು ದೊಡ್ಡದಾಗಿ ಬೆಳಿಸಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಮಾಡುವುದಾಗಿ ಹೇಳಿದರು ಹಾಗೂ ಸಂಘಟನೆಯ ಮುಖಾಂತರ ಸರ್ಕಾರದಿಂದ ಬರುವಂತ ಸೌಲಭ್ಯಗಳನ್ನು ಚಾಲಕರಿಗೆ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷ ಶೇಖರ್ ಎಸ್, ಉಪ ಕಾರ್ಯಧ್ಯಕ್ಷ ರಾಘವೇಂದ್ರ ಪಡುಕೋಣೆ, ನಾಗರಾಜ್ ಬಿ, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಲೋಕೇಶ್ ಎಂ ಸಿ, ಬೆಳಗಾವಿ ಜಿಲ್ಲಾಧ್ಯಕ್ಷ ಲಿಂಗರಾಜ್ ಹಾದಿಮನಿ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಮತ್ತು ಚಾಲಕರು ಉಪಸ್ಥಿತರಿದ್ದರು.