ನಿಧನ ವಾರ್ತೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನೇಸರಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಿಂಗಪ್ಪ. ಆರ್. ಮಾಳನ್ನವರ ನಿಧನ.
ನೇಸರಗಿ. ಇಲ್ಲಿನ ಗ್ರಾಮ ಪಂಚಾಯತ ಅಧ್ಯಕ್ಷರು, ಪ್ರಗತಿಪರ ರೈತರು, ಗ್ರಾಮದ ಹಿರಿಯರಾದ ನಿಂಗಪ್ಪ ರುದ್ರಪ್ಪ. ಮಾಳನ್ನವರ (56) ಇವರು ಅನಾರೋಗ್ಯದಿಂದ ದಿನಾಂಕ 16-09-2024 ರಂದು ಬೆಳಿಗ್ಗೆ 4-00 ಗೆ ನಿಧನರಾದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು,ಸಹೋದರರು, ಅಪಾರ ಮಾಳನ್ನವರ ಬಂದು ಬಳಗವನ್ನು ಅಗಲಿದ್ದಾರೆ.
ನಿಧನಕ್ಕೆ ಶೋಕ. ಗ್ರಾ ಪಂ. ಅಧ್ಯಕ್ಷರಾದ ನಿಂಗಪ್ಪ ಮಾಳನ್ನವರ ನಿಧನಕ್ಕೆ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ,ಯುವ ಮುಖಂಡ ಸಚಿನ ಪಾಟೀಲ, ಗ್ರಾಮದ ಹಿರಿಯರು, ರಾಜಕೀಯ ಮುಖಂಡರು, ಗ್ರಾ ಪಂ. ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Post a Comment

0Comments

Post a Comment (0)