ಆಮ್ ಆದ್ಮಿ ಪಾರ್ಟಿ ಸಂಸ್ಥಾಪಕ
ಹಾಗೂ ದಿಲ್ಲಿ ಮುಖ್ಯಮಂತ್ರಿಗಳು ಅರವಿಂದ್ ಕೇಜ್ರಿವಾಲ್ ಜಾಮೀನು ಕಾರ್ಯಕರ್ತರಿಂದ ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಆಚರಣೆ...
ಈ ಸಂದರ್ಭದಲ್ಲಿ ಬೈಲಹೊಂಗಲ ತಾಲೂಕ ಅಧ್ಯಕ್ಷ. ಕಾರ್ತಿಕ್. ಹೋಟಕರ ಮಾತನಾಡಿ. ಕಾನೂನಿನ ನ್ಯಾಯ ದೇವತೆಗೆ ಹಾಗೂ ಸುಪ್ರೀಂ ಕೋರ್ಟಿಗೆ ಧನ್ಯವಾದ ತಿಳಿಸಿದರು ಸತ್ಯಕ್ಕೆ ಜಯ ಸಿಕ್ಕಿದೆ, ಸುಪ್ರಿಂಕೊರ್ಟ ನಿರ್ಧಾರ ಸ್ವಾಗತಿಸುತ್ತೇವೆ. ಸತ್ಯವೇ ನಮ್ಮ ನಂಬಿಕೆ. ಮುಂಬರುವ ಹರಿಯಾಣ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಕರ್ನಾಟಕದಲ್ಲಿ ಎಎಪಿ ಪಕ್ಷ ದೊಡ್ಡದಾಗಿ ಮತ್ತು ಬಲವಾಗಿ ಬೆಳೆಯುತ್ತದೆ. ಬರುವಂತ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ, ಪಕ್ಷಕ್ಕೆ ಹೊಸದಾಗಿ ಬರುವ ಜನರನ್ನು ಸ್ವಾಗತಿಸುತ್ತೇವೆ ಇಡೀ ಜಿಲ್ಲೆಯಲ್ಲಿ ಎಎಪಿ ಪಕ್ಷವನ್ನು ಬಲಪಡಿಸಲಾಗುವುದು. ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ. ಬನ್ನಿ ನ್ಯಾಯಕ್ಕಾಗಿ.ಸಮಾನತೆಗಾಗಿ ಸಹಕರಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಬೈಲಹೊಂಗಲ ಕಾರ್ಯಕರ್ತರು ಉಪಸ್ಥಿತರಿದ್ದರು.