ಹಿರೇಬೂದನೂರ್ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ .

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಸವದತ್ತಿ ತಾಲೂಕಿನ ಹಿರೇಬುದನೂರ, ಚಚಡಿ ಹಾಗೂ ಮುರಗೋಡ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬುದನೂರಿನಲ್ಲಿ ದಿನಾಂಕ 13-09-2024 ರಂದು ನಡೆಸಲಾಯಿತು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀ ಉಮೇಶ್ವರ ಮರಗಾಲ ಅವರು ವಹಿಸಿಕೊಂಡಿದ್ದರು. ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಯಲ್ಲಪ್ಪ ನಾಯ್ಕರ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀ ಶಿವರಾಜ ರುದ್ರಪ್ಪನವರ ಮುಖ್ಯ ಅತಿಥಿ ಸ್ಥಾನ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸವದತ್ತಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ, ಎನ್, ಬ್ಯಾಳಿ ಸರ್ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳಾದ ಶ್ರೀಮತಿ ವಸ್ತ್ರದ ಮೇಡಂ ಅವರು,ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರೇವಣ್ಣವರ ಸರ್, ಶಿಕ್ಷಣ ಸಂಯೋಜಕರು, ಊರಿನ ಹಿರಿಯರಾದ ಶ್ರೀ ಸೋಮಪ್ಪ ಮರಗಾಲ, ಗ್ರಾಮ ಪಂಚಾಯತಿಯ ಸದಸ್ಯರು, SDMC ಸದಸ್ಯರು, ಸರಕಾರಿ ನೌಕರರ ಸಂಘದ ಸಹ ಕಾರ್ಯದರ್ಶಿಗಳಾದ ಶ್ರೀ ಮಹಾಂತೇಶ ಮುಂಡರಗಿ, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ನವೀನ್ ಪಾಟೀಲ್, ಪ್ರಧಾನ ಗುರುಮತೆಯರಾದ ಶ್ರೀಮತಿ ಎಂ.ಐ.ಮಲ್ಲಾಡಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರ ಸಂಘದ ಪ್ರತಿನಿಧಿಗಳು, ಪ್ರಧಾನ ಗುರುಗಳು, ಶಿಕ್ಷಕರು ಹಾಗೂ ಮಕ್ಕಳು ಊರಿನ ಗಣ್ಯ ಮಾನ್ಯರು ಹಾಜರಿದ್ದರು. ಕಾರ್ಯಕ್ರಮದ ಬಗ್ಗೆ ಶ್ರೀ ಯಲ್ಲಪ್ಪ ನಾಯ್ಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು, ಬಹುಮಾನ ಪ್ರಯೋಜಕರನ್ನು ಸತ್ಕಾರಿಸಲಾಯಿತು. ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಶಿಕ್ಷಕರಾದ ಶ್ರೀ ಎಂ.ಕೆ.ನಿರೂಪಣೆ ಮಾಡಿದರು. ಶ್ರೀ ಬಿ.ಎಸ್. ವಾರಿ ಶಿಕ್ಷಕರು ಸ್ವಾಗತಿಸಿ ವಂದಿಸಿದರು.

Post a Comment

0Comments

Post a Comment (0)