ಬೈಲಹೊಂಗಲ:ರಾಜ್ಯ ಸರ್ಕಾರದ ಆದೇಶದಂತೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾನವ ಸರಪಳಿ ನಿರ್ಮಿಸುವ ಮೂಲಕ ಆಚರಿಸಲು ತೀರ್ಮಾನಿಸಲಾಗಿದೆ.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸಪ್ಟಂಬರ್ 15 ರಂದು ಆಚರಿಸಲು ಸರ್ಕಾರ ನಿರ್ಧರಿಸಿದೆ.
ಬೈಲಹೊಂಗಲ ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಲಾಯಿತು ಗ್ರೇಡ್ ಟು ತಹಸೀಲ್ದಾರ್ ಬೀ ಜಿ ಕುಲಕರ್ಣಿ ಅವರು ಮಾತನಾಡಿ 15 ರಂದು ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾನವ ಸರಪಳಿ ಮಾಡುವುದರ ಮುಖಾಂತರ ತಾಲೂಕಿನ ಗಡಿ ಪ್ರಾರಂಭವಾಗುವ ಬೆಳಗಾವಿ ಬಾಗಲಕೋಟೆ ಹೆದ್ದಾರಿ ಇಂಚಲ ಗ್ರಾಮದ ಮಹಾ ದ್ವಾರದಿಂದ ಗಡಿ ಮುಕ್ತಾಯ ವಾಗುವ ಕರಡಿಗುದ್ದಿ ಗ್ರಾಮದ ವರೆಗೆ ಪ್ರತಿ ಕಿಲೋಮೀಟರ್ ಸುಮಾರು 15 ಸಾವಿರ ಜನರನ್ನು ಒಳಗೊಂಡು ಮಾನವ ಸರಪಳಿ ನಿರ್ಮಿಸಿ ಅದರಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಹಾಗೂ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅದರಂತೆ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.