ಬೈಲಹೊಂಗಲ: ಬೈಲಹೊಂಗಲ ತಾಲೂಕು ನಾಗನೂರ ಗ್ರಾಮ ಪಂಚಾಯತ ಅಧ್ಯಕ್ಷ ಹುದ್ದೆಗೆ ಶ್ರೀಮತಿ ಬಸವ್ವ ಬಾಳಪ್ಪ ಶಿರಸಂಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಗನೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಕುಮಾರಿ ಶೋಭಾ ಪಾಟೀಲ ಅವರ ರಾಜೀನಾಮೆಯಿಂದ ತೆರುವಾಗಿದ್ದ ಗ್ರಾಮ ಪಂಚಾಯತ ಹುದ್ದೆಗೆ ದಿ .೧೦/೦೯/೨೦೨೪ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಶ್ರೀಮತಿ ಬಸವ್ವ ಶಿರಸಂಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುಮಾರು ೧೪ ಪಂಚಾಯತ ಸಧಸ್ಯರನ್ನು ಹೊಂದಿರುವ ನಾಗನೂರು ಗ್ರಾಮ ಪಂಚಾಯತ . ಸುಮಾರು ೮ ಜನ ಮಹಿಳಾ ಹಾಗೂ ೭ ಜನ ಪುರುಷ ಸಧಸ್ಯರಿದ್ದು ನಾಲ್ಕನೇ ಭಾರಿ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಇನ್ನುಳಿದ ಅವದಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಶ್ರೀಮತಿ ಬಸವ್ವ ಬಾಳಪ್ಪ ಶಿರಸಂಗಿ .ತಮ್ಮ ಆಯ್ಕೆಗೆ ಹರ್ಷವ್ಯಕ್ತಪಡಿಸಿದ್ದಾರೆ ಸಹಸದಸ್ಯರಿಗೂ ಹಾಗೂ ಸಿಬ್ಬಂದಿಗಳಿಗೆ ಗ್ರಾಮದ ಗುರುಹಿರಿಯರಿಗೆ ಧನ್ಯವಾದ ತಿಳಿಸಿದ್ದಾರೆ.ಸಂಧರ್ಭದಲ್ಲಿ ಮಾಜಿ ಜಿ .ಪ ಸಧಸ್ಯ ಹಾಗೂ ಮಾಜಿ ರಂಗಾಯಣ ನಿರ್ಧೇಶಕ ರಮೇಶ ಪರವೀನಾಯ್ಕರ. ಮಾಜಿ ತಾಲೂಕು ಪಂಚಾಯತ ಸದಸ್ಯ ಬಾಬಣ್ಣ ಶಿವನಾಯ್ಕರ ಮಹಾಂತೇಶ ಗದಗ. ಬಸನಾಯ್ಕ ಶಿವನಾಯ್ಕರ. ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಸಿದ್ದಾಮ ಪರವೀನಾಯ್ಕರ. ಶಿವಾನಂದ ಶಿರಸಂಗಿ ಮಹಿಳಾ ಸದಸ್ಯರು ಹಾಗೂ ಗ್ರಾಮ ಪಂಚಾಯತ ಸದಸ್ಯರುಹಾಗೂ ಊರಿನ ಪ್ರಮುಖರು ಉಪಸ್ತಿತರಿದ್ದರು ಚುನಾವಣಾ ಅಧಿಕಾರಿ AWE ಖಾನಾಪೂರೆ ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಂಗಪ್ಪ ಮರೆನ್ನವರ. ಪಂಚಾಯತ ಸಿಬ್ಬಂದಿಗಳು. ಮತ್ತು ನೇಸರಗಿ ಪೋಲಿಸ್ ಅಧಿಕಾರಿ ಸಿಗೇಹಳ್ಳಿ.ಮತ್ತು ಪೋಲಿಸ್ ಸಿಬ್ಬಂದಿ ಉಪಸ್ತಿತರಿದ್ದರು.
3/related/default