ಕೊಳವೆ ಬಾವಿ (ಬೋರ್ವೆಲ್) ನೀರು ಸೇವನೆಯಿಂದ ಸುಮಾರು 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ ...!!!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಕೊಳವೆ ಬಾವಿ (ಬೋರ್ವೆಲ್) ನೀರು ಸೇವನೆಯಿಂದ ಸುಮಾರು 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ ಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಕಳೆದ ಒಂದು ವಾರದಿಂದ ಎಲ್ಲರಲ್ಲೂ ಅನಾರೋಗ್ಯ ಕಾಣಿಸಿಕೊಂಡಿತ್ತು. ಸೋಮವಾರ ಏಕಾಏಕಿ ಪರಿಸ್ಥಿತಿ ಉಲ್ಬಣಗೊಂಡು ವಾಂತಿ-ಬೇಧಿಯಿಂದಾಗಿ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮನೆಗಳಿಗೆ ನೀರು ಪೂರೈಸುವ ಕೊಳವೆಯಲ್ಲಿ ಚರಂಡಿ ನೀರು ಸೇರಿರುವುದೇ ಅವಘಡಕ್ಕೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬೋರ್‌ವೆಲ್ ಮೂಲಕ ಟ್ಯಾಂಕ್‌ಗೆ ನೀರು ತುಂಬಿಸಿ ಅದನ್ನು ಮನೆಮನೆಗೆ ಸರಬರಾಜು ಮಾಡಲಾಗುತ್ತಿದ್ದು, ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ ಕಾರಣ ಈ ಘಟನೆ ಸಂಭವಿಸಿದೆಯೆನ್ನಲಾಗಿದೆ.

Tags:

Post a Comment

0Comments

Post a Comment (0)