ನೇಸರಗಿ:ಧರ್ಮಸ್ಥಳದಲ್ಲಿ ಮಾಡುವ ಸತ್ಕಾರ್ಯ ಗ್ರಾಮೀಣ ದೇವಸ್ಥಾನಗಳಲ್ಲಿ ಮಾಡಿ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಧರ್ಮಸ್ಥಳದಲ್ಲಿ ಮಾಡುವ ಸತ್ಕಾರ್ಯ ಗ್ರಾಮೀಣ ದೇವಸ್ಥಾನಗಳಲ್ಲಿ ಮಾಡಿ. ಪ್ರವೀಣ ದೊಡ್ಡಮನಿ
ನೇಸರಗಿ. ದೂರದ ಶ್ರೀ ಕ್ಷೇತ್ರ ಧರ್ಮಸ್ಥಳ ಹೋಗಿ ಮಾಡುವ ಭಕ್ತಿ, ಭಾವಕ್ಕಿಂತ ಎಲ್ಲ ದೇವರು ಒಂದೇ ಎನ್ನುವ ಮನೋಭಾವನೆಯೊಂದಿಗೆ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಘ ಮತ್ತು ಗ್ರಾಮೀಣ ಜನರ ಸಹಾಯ ಸಹಕಾರದಿಂದ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಇದರಲ್ಲಿ ಸಂಘದ ಸದಸ್ಯರು ಇಚ್ಚಾಶಕ್ತಿಯಿಂದ ಕೆಲಸ ಮಾಡುತ್ತಿದ್ದು ಈ ಕಾರ್ಯಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಕಾರ್ಯಯೋಜನೆಗಳನ್ನು ರೂಪಿಸಿದ್ದು ನಿರಂತರ ಸೇವೆ, ಸ್ವಚ್ಛತೆ, ಪರಿಹಾರ, ಜೀರ್ನೋದ್ದಾರ, ಕೆರೆ ಕಾಮಗಾರಿ, ಗುಡಿ, ದೇವಸ್ಥಾನ, ಬಡವರ ಅಭಿವೃದ್ಧಿಗೆ ಸದಾ ತನ್ನ ಸಹಾಯ ಹಸ್ತವನ್ನು ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಘ ಚಾಚಿದೆ ಎಂದು ಸಂಘದ ನೇಸರಗಿ ವಲಯ ಮೇಲ್ವಿಚಾರಕರಾದ ಪ್ರವೀಣ ದೊಡಮನಿ ಹೇಳಿದರು. 
     ಅವರು ಶನಿವಾರದಂದು ಗ್ರಾಮದ ಶ್ರೀ ಮಾರುತಿ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
     ಈ ಸಂದರ್ಭದಲ್ಲಿ ಶ್ರೀ ಮಾರುತಿ ಸೇವಾ ಕಮಿಟಿಯ ಬಸಪ್ಪ ಕಗ್ಗಣಗಿ, ಮಲ್ಲಪ್ಪ ಗುಜನಟ್ಟಿ, ಗುರುಪಾದಯ್ಯ ಚರಂತಿಮಠ, ದೇಮಣ್ಣ ಗುಜನಟ್ಟಿ, ನಾಗಪ್ಪ ಗಡ್ಡಿ, ಗೋಪಾಲ ಪೂಜೇರಿ, ವೀರಬಸ್ಸು ಶಿಂತ್ರಿ, ರಮೇಶ ಅಂಬಿಗೇರ, ಸಂಘದ ಸೇವಾ ಪ್ರತಿನಿಧಿಗಳಾದ ನಾಗವೇಣಿ ಬಡಿಗೇರ, ಶಾಂತಾ ಚಚಡಿ ಸಂಘದ ಎಲ್ಲ ಪ್ರತಿನಿಧಿಗಳು, ಸ್ವಸಹಾಯ ಹಾಗೂ ಪ್ರಗತಿ ಬಂದು ಸದಸ್ಯರು, ಗ್ರಾಮಸ್ಥರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Post a Comment

0Comments

Post a Comment (0)