ಮರಕುಂಬಿ ಹೊರವಲಯದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಇನಾಮದಾರ ಶುಗರ್ಸ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಸದರಿ ಕಾರ್ಯಕಮದಲ್ಲಿ ಮುಖ್ಯ ಅತಿಥಿಗಳಾಗಿ ಮರಕುಂಬಿ ಗ್ರಾಮದ ಯುವದೂರಿನ ಹಾಗೂ ಕಾರ್ಖಾನೆಯ ಹಿತ ಚಿಂತಕರಾದ ಶ್ರೀಯುತ ಕಾರ್ತಿಕ ಪಾಟೀಲ ವಹಿಸಿಕೊಂಡಿದ್ದರು. ಶ್ರೀಯುತ ಮಹಾಂತೇಶ್ ಎಂ ನರಸಣ್ಣವರ ಗ್ರಾಮ ಪಂಚಾಯತಿ ಅಧ್ಯಕ್ಷರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಧ್ವಜಾರೋಹಣ ನೆರವೇರಿಸಿ ಮುಖ್ಯ ಅತಿಥಿಗಳಾದ ಕಾರ್ತಿಕ್ ಪಾಟೀಲ್ ಅವರು ಈ ಭಾಗದ ಜನರಿಗೆ ಸಕ್ಕರೆ ಕಾರ್ಖಾನೆ ಅತ್ಯವಶ್ಯಕ ಬೇಕಾಗಿದ್ದು ರೈತರ ಈ ಆಸೆಯನ್ನು ಮನಗಂಡ ಹಾಗೂ ಈ ಭಾಗದ ಸರ್ವಾಂಗಿನ ಅಭಿವೃದ್ಧಿಯ ದೃಷ್ಟಿ ಇಟ್ಟುಕೊಂಡು ಪ್ರಭಾಕರ್ ಕೋರೆ ಸರ್ ಅವರು ಹಾಗೂ ದಿವಂಗತ ಡಿ ಬಿ ಇನಾಮದಾರ ಸಾಹೇಬರ ಆಶಯದಂತೆ ಸದರಿ ಕಾರ್ಖಾನೆಯೂ ಬರುವ ದೀಪಾವಳಿಗೆ ಕಬ್ಬು ನುರಿಸುವ ಕಾರ್ಯ ಪ್ರಾರಂಭ ಮಾಡಲಿದ್ದು ಎಲ್ಲಾ ರೈತ ಬಾಂಧವರು ಹೆಚ್ಚಿನ ಕಬ್ಬನ್ನು ಕಾರ್ಖಾನೆಗೆ ಕಳಿಸಲು ವಿನಂತಿಸಲು ಸದರಿ ಸಕ್ಕರೆ ಕಾರ್ಖಾನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ರೈತ ಬಾಂಧವರಿಗೆ ವಿನಂತಿಸಿದರು.
ನಂತರ ಮಾತನಾಡಿದ ಸಕ್ಕರೆ ಕಾರ್ಖಾನೆಯ ಪಾಲುದಾರರು ಈ ಭಾಗದ ಗಣ್ಯ ಉದ್ದಿಮೆದಾರರು ಹಾಗೂ ಬಿಜೆಪಿ ಯುವ ಮುಖಂಡರಾದ ಶ್ರೀ ವಿಜಯ್ ಮೆಟಗುಡ್ಡ ಅವರು ಸದರಿ ಕಾರ್ಖಾನೆಯ ಮೂಲ ರೂವಾರಿಗಳಾದ ಡಿಬಿ ಇನಾಮದಾರ ಅವರನ್ನು ನೆನೆಸಿಕೊಳ್ಳುತ್ತಾ ಸದರಿ ಕಾರ್ಖಾನೆಯ ಪ್ರಾರಂಭಿಕ ಕಾರ್ಯವನ್ನು ಕೈಗೆತ್ತಿಕೊಂಡ ಮೇಲೆ ಬಂದ ಎಲ್ಲ ಕಷ್ಟಗಳನ್ನು ವಿವರಿಸಿತ್ತಾ ನಂತರ ನಮ್ಮ ಜೊತೆಗೂಡಿದ ಡಾ ಪ್ರಭಾಕರ್ ಕೋರೆ ಸರ್ ಅವರ ನೇತೃತ್ವದಲ್ಲಿ ಕಾರ್ಖೆನಯ ಕಟ್ಟಡ ಕಾರ್ಯಗಳು ಅತಿ ವೇಗವಾಗಿ ಕಟ್ಟಡ ಕಾರ್ಯ ಪ್ರಾರಂಭವಾಗಿ ಬರುವ ದೀಪಾವಳಿಗೆ ಕಬ್ಬು ನುರಿಸುವ ಹಂಗಾಮನ್ನು ಪ್ರಾರಂಭ ಮಾಡಲಾಗುವುದು. ಹಾಗೂ ಈ ಸಂದರ್ಭದಲ್ಲಿ ಕಾರ್ಖಾನೆಯ ಕೆಲಸದ ಎಲ್ಲಾ ಕಟ್ಟಡ ಮತ್ತೆದಾರರನ್ನು ಕಾರ್ಮಿಕ ಬಂಧುಗಳನ್ನು ವಿಭಾಗದ ಎಲ್ಲರನ್ನೂ ವಿಶೇಷವಾಗಿ ಅಭಿನಂದಿಸುತ್ತಾ ಈ ಭಾಗದ ರೈತ ಬಾಂಧವರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಬೆಳೆದು ನಮ್ಮ ಕಾರ್ಖಾನೆಗೆ ಕಳಿಸಲು ವಿನಂತಿಸಿದರು. ಕಾರ್ಖಾನೆಯಿಂದ ಈ ಭಾಗದ ರೈತರಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಹಾಗೂ ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಕಾರ್ಖಾನೆ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಈ ವೇಳೆಯಲ್ಲಿ ತಿಳಿಸಿದರು.
ಪ್ರಾರಂಭದಲ್ಲಿ ಮುಖ್ಯ ಆಡಳಿತ ಅಧಿಕಾರಿಯಾದ ಶ್ರೀ ರವೀಂದ್ರ ಚ ಪಟ್ಟಣಶೆಟ್ಟಿಯವರು ಮುಖ್ಯ ಅತಿಥಿಗಳನ್ನು ಸಭೆಯಲ್ಲಿ ಹಾಜರಿದ್ದ ರೈತ ಬಾಂಧವರನ್ನು ವಿಭಾಗದ ಮುಖ್ಯಸ್ಥರನ್ನು ಪತ್ರಿಕಾ ಮಾಧ್ಯಮದ ಮಿತ್ರರನ್ನು ಸ್ವಾಗತಿಸಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಘಟಕದ ಮುಖ್ಯಸ್ಥರಾದ ಶ್ರೀನಿವಾಸ ಸುಂಕರ್ ಅವರು ಪ್ರಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಅಧಿಕಾರಿಗಳು ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರು ಸುತ್ತಲಿನ ರೈತ ಬಾಂಧವರು ಹಾಗೂ ಗಣ್ಯರು ಸದರಿ ಕಾರ್ಯಕ್ರಮಕ್ಕೆ ಹಾಜರಿದ್ದು ಶೋಭೆ ತಂದರು.
ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಶ್ರೀನಿವಾಸ್ ಕೋತ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.