ಥೆಲಸ್ಸೇಮಿಯಾ ರೋಗ ಪೀಡಿತ ಮಕ್ಕಳಿಗಾಗಿ ಇಲಕಲ್ಲಿನ ಶ್ರೀರಾಮಾನುಜಾಚಾರ್ಯ ಫೌಂಡೇಶನ್ ವತಿಯಿಂದ ನಗರದ ಮಹೇಶ್ವರಿ ಚಿಕ್ಕ ಮಕ್ಕಳ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ನಗರದ ಸಂಘ ಸಂಸ್ಥೆಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ಆಗಮಿಸಿದ ಜನರು ರಕ್ತದಾನ ಮಾಡಿದರು.
ಇದೇ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ತದನಂತರ ಮಾತನಾಡಿದ ಅವರು ನಮ್ಮ ಕ್ಷೇತ್ರದಲ್ಲಿ ಇಂತಹ ಆಸ್ಪತ್ರೆ ಇರುವುದು ನಮಗೆಲ್ಲ ಹೆಮ್ಮಯ ವಿಷಯ ಎಂದರು.