ಕಿತ್ತೂರು ಕ್ರಾಂತಿ ವಾಹಿನಿ...
ಚ, ಕಿತ್ತೂರು:ಜಂಗಮ ಯುವ ವೇದಿಕೆ ಹಾಗೂ ಅರಣ್ಯ ಇಲಾಖೆಯ ಸಯುಕ್ತ ಆಶ್ರಯದಲ್ಲಿ ನಡೆದ ಪರಿಸರ ದಿನಾಚರಣೆ ಅಂಗವಾಗಿ ಐತಿಹಾಸಿಕ ಚೌಕಿಮಠದ ಪಕ್ಕದ ಸ್ಮಶಾನದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರವನ್ನು ಬೆಳೆಸುವುದರಿಂದ ನಮ್ಮ ಆರೋಗ್ಯವು ವೃದ್ಧಿಯಾಗುತ್ತದೆ, ಹಾಗೂ ಆಮ್ಲಜನಕ ಹೆಚ್ಚಾಗಿ ಆಗುತ್ತದೆ, ಶುದ್ಧ ಗಾಳಿಯಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಕಲ್ಮಠ ಶ್ರೀಗಳು ಮಾತನಾಡಿದರು.
ಪ್ರತಿಯೊಬ್ಬರು ಮನೆಗೊಂದು ಸಸಿಯನ್ನು ನೆಡುವುದರಿಂದ ವಾತಾವರಣದಲ್ಲಿ ಬದಲಾವಣೆಗಳು ಕಂಡುಬರುತ್ತವೆ ಮಳೆಯ ಪ್ರಮಾಣ ಹೆಚ್ಚಾಗಿ ಆಗುತ್ತದೆ ಕಾಲಕ್ಕೆ ತಕ್ಕಂತೆ ಮಳೆಗಾಲ ಪ್ರಾರಂಭವಾಗುತ್ತವೆ ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಸಂಜು ಮಗದುಂಮ್ ಹಾಗೂ ಸಿಬ್ಬಂದಿ ವರ್ಗ, ಜಂಗಮ ಯುವ ವೇದಿಕೆ ಅಧ್ಯಕ್ಷ ವೀರೇಶ್ ಹಿರೇಮಠ ಉಪಾಧ್ಯಕ್ಷ ಮಂಜುನಾಥ ಶಿವಳ್ಳಿಮಠ ಖಜಾಂಚಿ ಆನಂದ ನರೇಂದ್ರ ಮಠ ಸದಸ್ಯರಾದ ಶಿವಯೋಗಿ ಹಿರೇಮಠ ಅಜ್ಜಪ್ಪ ಹಿರೇಮಠ , ಸಂಗಯ್ಯ ಹಿರೇಮಠ, ಗಂಗಯ್ಯ ಗುರುವೈನವರ, ಶಿವರುದ್ರಯ್ಯ ಕಟ್ಟಿಮಠ, ಆನಂದ ವಸ್ತ್ರದ, ಬಸಯ್ಯ ಪೂಜಾರ, ಈರಣ್ಣ ಹಿರೇಮಠ, ಸಂತೋಷ ಕಲ್ಮಠ, ಕಲ್ಲಯ್ಯ ಪತ್ರಿಮಠ, ಗುರು ಹಿರೇಮಠ, ರಾಜು ಆಸಂಗಿಮಠ, ಅಪ್ಪೇಶ ಹಿರೇಮಠ, ಕಾರ್ತಿಕ್ ಹಿರೇಮಠ, ವಿಜಯ ಬೈಲೂರಮಠ, ಅಪ್ಪಯ್ಯ ವಸ್ತ್ರದ, ಹಿರಿಯರಾದ ಎಸ್ ಬಿ ಹಿರೇಮಠ ಸುರೇಶ್ ಮುರುಡಿಮಠ ಹಾಗೂ ಸಂಘದ ಎಲ್ಲ ಸದಸ್ಯರು ಹಾಗೂ ಸಮಸ್ತ ಜಂಗಮ ಬಂಧುಗಳು ಜೊತೆಗೆ ಸಾರ್ವಜನಿಕರು ಉಪಸ್ಥಿತರಿದ್ದರು.