ಶಿರಸಿ: ಸಂಸದ ಅನಂತಕುಮಾರ ಹೆಗಡೆ ಅವರು ಶಿರಸಿ ಕೆಎಚ್ ಬಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 68ರಲ್ಲಿ ಮತದಾನ ಮಾಡಿದರು.
ಸುಮಾರು 15 ನಿಮಿಷಗಳ ಕಾಲ ಕಾದು ನಂತರ ಮತಗಟ್ಟೆ ಒಳಗೆ ಸರತಿಯಲ್ಲಿ ಸಾಗಿ ಮತದಾನ ಮಾಡಿದರು. ಹೆಗಡೆ ಅವರ ಜೊತೆ ಪತ್ನಿ ರೂಪಾ ಹೆಗಡೆ ಕೂಡ ಇದ್ದರು.
ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಮತದಾನ ದೇಶದ ಎಲ್ಲರ ಕರ್ತವ್ಯ ಎಂದಷ್ಟೇ ಹೇಳಿದರು.