Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ: ಪುದುಚೇರಿ-ದಾದರ ಚಾಲುಕ್ಯ ಎಕ್ಸಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿರುವಾಗ ಟಿಕೆಟ್ ಚೆಕ್ ಮಾಡುವಾಗ ಜಗಳ ತೆಗೆದ ಮುಸುಕುಧಾರಿ ವ್ಯಕ್ತಿಯೋರ್ವ ಚಾಕು ಇರಿದುದ್ದರಿಂದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಟಿಕೆಟ್ ಪರೀವೀಕ್ಷಕ ಹಾಗೂ ಪ್ರಯಾಣಿಕ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ರೈಲಿನಲ್ಲಿ ಕಸಗೂಡಿಸುವ ಸಿಬಂದಿ ದೇವರ್ಷಿ ವರ್ಮ ಎಂಬಾತ ಮೃತಪಟ್ಟಿದ್ದು, ಟಿಕೆಟ್ ಪರೀವೀಕ್ಷಕ ಆಶ್ರಫ ಕಿತ್ತೂರ ಹಾಗೂ ರೈಲು ಪ್ರವಾಸಿಗ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲುಕ್ಯ ಎಕ್ಸಪ್ರೆಸ್ ರೈಲು(110066) ಗುಂಜಿ ಹಾಗೂ ಖಾನಾಪುರ ಮಧ್ಯೆ ಬಂದಾಗ ಈ ಘಟನೆ ನಡೆದಿದೆ. ಹಂತಕ ಮುಸುಕುಧಾರಿ ವ್ಯಕ್ತಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ. ಈ ಬಗ್ಗೆ ಟಿಕೆಟ್ ಪರೀವೀಕ್ಷಕ ಆಶ್ರಫ ಕಿತ್ತೂರ ಬಂದು ಕೇಳಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದೆ. ಜಗಳ ಬಿಡಿಸಲು ಬಂದ ರೈಲಿನ ಕಸಗುಡಿಸುತ್ತಿದ್ದ ಸಿಬಂದಿ ವರ್ಮಾ ಅವರಿಗೆ ದುಷ್ಕರ್ಮಿ ಚಾಕುವಿನಿಂದ ಎದೆಗೆ ಚುಚ್ಚಿದ್ದರಿಂದ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಆಶ್ರಫ ಕಿತ್ತೂರ ಹಾಗೂ ಇನ್ನೋರ್ವ ರೈಲು ಪ್ರಯಾಣಿಕರಿಗೆ ಗಾಯವಾಗಿದೆ.
ಮುಸುಕುಧಾರಿ ವ್ಯಕ್ತಿ ರೈಲಿನಿಂದ ಜಿಗಿದು ತಪ್ಪಿಸಿಕೊಂಡು ಹೋಗಿದ್ದಾನೆ. ಈತನ ಶೋಧಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0Comments

Post a Comment (0)