ಬೈಲಹೊಂಗಲ:ಬಿತ್ತನೆ ಬೀಜದ ದರ ಶೇಕಡಾ 60 ರಷ್ಟು ಹೆಚ್ಚಳ, ವಿರೋಧಿಸಿ ನಾಳೆ ಎಸಿ ಅವರ ಮುಖಾಂತರ ಕೃಷಿ ಮಂತ್ರಿಗಳಿಗೆ ಮನವಿ.
*ಆತ್ಮೀಯ ರೈತ ಬಂಧುಗಳೆ*
*ಬಿತ್ತನೆ ಬೀಜದ ದರ ಶೇ 60 ರಷ್ಟು ಹೆಚ್ಚಳ ಮಾಡಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ, ಬೀಜದ ದರ ಗಗನಕ್ಕೆ ಏರಿರುವದನ್ನು ಸರ್ಕಾರ ಕಡಿಮೆ ಮಾಡಬೇಕು ಈಗಾಗಲೆ ಬೀಜ ಖರೀದಿಸದ ರೈತರ ಖಾತೆಗೆ ಹೆಚ್ಚಿನ ಹಣವನ್ನು ಮರಳಿಸುವಂತೆ ಆಗ್ರಹಿಸಿ ಸಮಸ್ತ ಕೃಷಿ ನಿರತ ರೈತ ಸಮುದಾಯದಿಂದ ಬಿತ್ತನೆ ಬೀಜ ದರ ಏರಿಸಿದ್ದನ್ನು ಖಂಡಿಸಿ ಬೈಲಹೊಂಗಲ ಉಪವಿಭಾಗಾಧಿಕಾರಿ ಮೂಲಕ ಕೃಷಿ ಮಂತ್ರಿಗಳಿಗೆ ನಾಳೆ ಬುಧವಾರ ದಿನಾಂಕ 29.05.2024 ರಂದು ಮುಂಜಾನೆ 10.30 ಘಂಟೆಗೆ ಮನವಿ ಕೊಡಲು ನಿರ್ಧರಿಸಲಾಗಿದೆ. ಬೈಲಹೊಂಗಲ ನಾಡಿನ ಸಮಸ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿ*
ಮಹಾಂತೇಶ ಕಮತ
ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ