ಬೆಳಗಾವಿ: ಕರುನಾಡ ಚಕ್ರವರ್ತಿ
ಡಾ.ಶಿವರಾಜ್ ಕುಮಾರ್ ಸವದತ್ತಿ
ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ
ನೀಡಿದ್ದಾರೆ. ಬೆಳಗಾವಿಯಲ್ಲಿ
“ಉತ್ತರಕಾಂಡ" ಚಿತ್ರದ ಚಿತ್ರೀಕರಣ
ಮುಗಿಸಿಕೊಂಡು ದೇವಿಯ ದರ್ಶನ
ಪಡೆದ ಶಿವಣ್ಣನಿಗೆ ಈ ಕ್ಷೇತ್ರ
ಅದೃಷ್ಟವಂತೆ. ಹಿಂದೆ ಶ್ರೀರಾಮ್,
ಮೈಲಾರಿ ಮುಂತಾದ ಬ್ಲಾಕ್ ಬಸ್ಟರ್
ಚಿತ್ರಗಳು ಪಾಲಿಗೂ ಸೌದತ್ತಿ ಎಲ್ಲಮ್ಮ
ಅದೃಷ್ಟ ದೇವತೆ. ಉತ್ತರಕಾಂಡದ
ಚಿತ್ರೀಕರಣದ ನಂತರ ಶಿವಣ್ಣ ತಾಯಿ
ಆಶಿರ್ವಾದವನ್ನು ಪಡೆದಿರುತ್ತಾರೆ.
ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್
ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು
ಯೋಗಿ ಜಿ ರಾಜ್ ನಿರ್ಮಿಸಿರುವ
“ಉತ್ತರಕಾಂಡ” ರೋಹಿತ್ ಪದಕ
ನಿರ್ದೇಶನದ ಬಹು ನಿರೀಕ್ಷಿತ ಆಕ್ಷನ್
ಡ್ರಾಮಾ ಚಿತ್ರವಾಗಿದೆ.