ನೇಹಾ ಹಿರೇಮಠ ಹತ್ಯೆ ಖಂಡಿಸಿ ಬೈಲಹೊಂಗಲದ ABVP ಕಾರ್ಯಕರ್ತರಿಂದ ಪ್ರತಿಭಟನೆ...
ಬೈಲಹೊಂಗಲ: ನೇಹಾ ಹಿರೇಮಠ ಹತ್ತೇ ಖಂಡಿಸಿ ಬೈಲಹೊಂಗಲದ ನಗರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಮಹಾಲಕ್ಷ್ಮಿ ದೇವಸ್ಥಾನದಿಂದ ಇಂಚಲ ಕ್ರಾಸ್ ಹಾಗೂ ಬಸ್ ನಿಲ್ದಾಣದ ಮೂಲಕ ರಸ್ತೆ ಉದ್ದಕ್ಕೂ ಸುಮಾರು ನೂರಾರು ABVP ವಿದ್ಯಾರ್ಥಿಗಳ ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ ರಸ್ತೆಯನ್ನು ತಡೆದು ಪ್ರತಿಭಟಿಸಿದರು, ಪ್ರತಿಭಟನೆಯಲ್ಲಿ ಕಾರ್ಯಕರ್ತರು ಮಾತನಾಡಿ ಪಾತಕಿ ಫಯಾಜ್ ನನ್ನು ಗಲ್ಲಿಗೇರಿಸಬೇಕು ಎಂದು ಖಂಡಿಸಿದರು, ಕೆಲವು ಗಂಟೆಗಳ ಕಾಲ ರಸ್ತೆ ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಯನ್ನು ಮಾಡಲಾಯಿತು.