ಚನ್ನಮ್ಮನ ಕಿತ್ತೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ದುರಂತ! ಗುಡಿಸಲಲ್ಲಿ ಇದ್ದ ಪಶು ಅಗ್ನಿಗೆ ಬಲಿ...!!!
ಚನ್ನಮ್ಮನ ಕಿತ್ತೂರು: ತಾಲೂಕಿನ ಅವರಾದಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಹೊತ್ತಿಕೊಂಡು ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ಆ ಮರದಿಂದ ಬೆಂಕಿ ಕಿಡಿ ಪಕ್ಕದಲ್ಲಿ ಇರುವ ಗುಡಿಸಲೊಂದಕ್ಕೆ ಬೆಂಕಿ ಹತ್ತಿ ಅನಾಹುತ ಜರುಗಿದೆ.
ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ಒಂದು ಎಮ್ಮೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಎರಡು ಎಮ್ಮೆ ಕರುಗಳು ಸುಟ್ಟು ಹೋಗಿವೆ. ಒಂದು ಎಮ್ಮೆ ಭಾಗಶ: ಸುಟ್ಟಿದ್ದು ಗುಡಿಸಲಿನಲ್ಲಿ ಇಟ್ಟಿದ್ದ ಸ್ಪ್ಲೆಂಡರ್ ದ್ವಿಚಕ್ರವಾಹನ ಸಂಪೂರ್ಣ ಸುಟ್ಟಿರುತ್ತದೆ. ದಿನ ಬಳಕೆ ವಸ್ತುಗಳು ಸಹಿತ ಸುಟ್ಟು ಕರಕಲಾಗಿವೆ. ಒಟ್ಟಾರೆ ಹೆಸ್ಕಾಂ ನಿರ್ಲಕ್ಷ್ಯದಿಂದಾಗಿ ಗುಡಿಸಲು ಸುಟ್ಟು ಭಸ್ಮವಾಗಿದೆ ಎಂದು ಹೇಳಬಹುದು.
ಈ ಅಗ್ನಿ ಅನಾಹುತದಿಂದ ಸುಮಾರು ಮೂರು ಲಕ್ಷದಷ್ಟು ಹಾನಿಯಾಗಿದೆ ಅಂತ ಅಂದಾಜಿಸಲಾಗಿದೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.