ರಾಜ್ಯದ ಇತಿಹಾಸದಲ್ಲೇ ಬಿಗ್ ಹಂಟ್; ಬೀದರ್‌ನಲ್ಲಿ ₹15 ಕೋಟಿ ಮೌಲ್ಯದ 1600 ಕೆಜಿ ಗಾಂಜಾ ವಶ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ರಾಜ್ಯದ ಇತಿಹಾಸದಲ್ಲೇ ಬಿಗ್​ ಹಂಟ್​​​; ಬೀದರ್‌ನಲ್ಲಿ ₹15 ಕೋಟಿ ಮೌಲ್ಯದ 1600 ಕೆಜಿ ಗಾಂಜಾ ವಶ
ಬಿದರ್: ಎನ್‌ಸಿಬಿ ಅಧಿಕಾರಿಗಳು (NCB Police) ಭರ್ಜರಿ ಕಾರ್ಯಾಚರಣೆ ನಡೆಸಿ, ಬೆಂಗಳೂರಿಗೆ (Bengaluru) ಬರುತ್ತಿದ್ದ ಬರೋಬ್ಬರಿ 1,596 ಕೆಜಿ ಗಾಂಜಾವನ್ನ (Ganja) ಜಪ್ತಿ ಮಾಡಿದ್ದಾರೆ. ಮಾದಕ ವಸ್ತು ಕಳ್ಳ ಸಾಗಣೆ (Drug Smuggling) ಮಾಡುತ್ತಿದ್ದ ಇಬ್ಬರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದಿಂದ (Andhra Pradesh) ಬರ್ತಿದ್ದ ಗಾಂಜಾ ತುಂಬಿದ್ದ ಲಾರಿಯನ್ನು ಸೀಜ್ ಮಾಡಿದ್ದು, ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದೇ ರೇಡ್ನಲ್ಲಿ 1596 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಬರೋಬ್ಬರಿ 15 ಕೋಟಿ 50 ಲಕ್ಷ ಮೌಲ್ಯವನ್ನು ಹೊಂದಿದೆ. ಆಂಧ್ರ ಪ್ರದೇಶದಿಂದ ಬೀದರ್‌ ಮೂಲಕ ಮಹಾರಾಷ್ಟ್ರಕ್ಕೆ ಖದೀಮರು ಗಾಂಜಾ ಸಾಗಿಸುತ್ತಿದ್ದರು. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಳ್ಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ದಾಳಿ ನಡೆಸಿ ಗಾಂಜಾ ಪ್ಯಾಕೆಟ್ಗಳನ್ನು ಸೀಜ್ ಮಾಡಿದ್ದಾರೆ.

ಗಾಂಜಾ ಸಾಗಣೆ ಮಾಡ್ತಿದ್ದ TS- 07 UL - 0972 ಸಂಖ್ಯೆಯ ಲಾರಿಯನ್ನು ಪೊಲೀಸರು ಸೀಜ್ ಮಾಡಿದ್ದು, ಡ್ರೈವರ್ ಮತ್ತು ಕ್ಲಿನರ್ ನನ್ನು ಎನ್ಸಿಬಿ ಪೊಲೀಸರು ಬಂಧನ ಮಾಡಿ ವಿಚಾರಣೆ ಮುಂದುವರಿಸಿದ್ದಾರೆ.

ಘಟನೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಬೀದರ್ ಎಸ್ಪಿ ಚನ್ನಬಸವಣ್ಣ ಲಂಗೋಟಿ, NCB ಪೊಲೀಸರ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸರಿಂದ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಹಳ್ಳಿ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಲಾಗಿದೆ. ಸಂಶಯಾಸ್ಪದವಾಗಿ ಕಂಡು ಬಂದ ಲಾರಿ ಪರಿಶೀಲಿಸಿದಾಗ ದೊಡ್ಡ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗಿದೆ. ಬರೋಬ್ಬರಿ 15 ಕೋಟಿ ರೂ. ಅಧಿಕ ಮೌಲ್ಯದ 1596 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ, ಪ್ರಮುಖ ಆರೋಪಿ ಲಾರಿ ಮಾಲೀಕನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಔರಾದ್ ಸಿಪಿಐ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಕಳೆದ ಜನವರಿ ಪ್ರಕರಣದಲ್ಲಿಯೂ ಈ ಲಾರಿಯನ್ನು ವಶಕ್ಕೆ ಪಡೆಯಲಾಗಿತ್ತು. ಫೆಬ್ರುವರಿ 14 ರಂದು ನ್ಯಾಯಾಲಯ ಮೂಲಕ ಲಾರಿ ಬಿಡಿಸಿಕೊಂಡು ಮತ್ತೆ ಅದೇ ದಂಧೆಯಲ್ಲಿ ತೊಡಗಿದ್ದರು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ 51 ಕೆಜಿ ಗಾಂಜಾ ವಶಕ್ಕೆ

ಕೇರಳದಿಂದ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ 51 ಕೆ.ಜಿ ಗಾಂಜಾ ವಶವನ್ನು ಗೋಣಿಬೀಡು ಪೊಲೀಸರು ಸೀಜ್ ಮಾಡಿದ್ದು, ಕೇರಳ ಮೂಲದ ಓರ್ವ ಗಾಂಜಾ ಪೆಡ್ಲರ್ ಬಂಧನ ಮಾಡಿದ್ದಾರೆ. ಕಸ್ಕೆಬೈಲು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ವೇಳೆ ಓಮ್ನಿ ಕಾರಿನಲ್ಲಿ ಗಾಂಜಾ ಪತ್ತೆಯಾಗಿದೆ. ಕೇರಳ ರಾಜ್ಯದ ಕೈಕಂಬದಿಂದ ಚಿಕ್ಕಮಗಳೂರಿಗೆ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಕೇರಳ ರಾಜ್ಯದ ಕೈಕಂಬ ನಿವಾಸಿ ಮುನೀರ್ (32) ಬಂಧಿತ ಆರೋಪಿಯಾಗಿದ್ದು, ಗೋಣಿಬೀಡು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
Tags:

Post a Comment

0Comments

Post a Comment (0)