ಚನ್ನಮ್ಮನ ಕಿತ್ತೂರಿಗೆ ಸುವರ್ಣ ಕರ್ನಾಟಕ ಸಂಭ್ರಮ 50ರ ಪಾರಂಪರಿಕ ಜ್ಯೋತಿ ಯಾತ್ರೆ...!
ಸುವರ್ಣ ಕರ್ನಾಟಕ ಸಂಭ್ರಮ - 50 ರ ಪಾರಂಪರಿಕ ಜ್ಯೋತಿ ರಥಯಾತ್ರೆ ಯು ಚನ್ನಮ್ಮನ ಕಿತ್ತೂರಿಗೆ ಇಂದು ಆಗಮಿಸಿದಾಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಎಸ್ ಬಿ ದಳುವಾಯಿ ಹೂಮಾಲೆ ಅರ್ಪಿಸುವುದರ ಮೂಲಕ ಸ್ವಾಗತಿಸಿದರು. ನಂತರ ನಡೆದ ಪೂಜಾ ಸಮಾರಂಭದಲ್ಲಿ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀoದ್ರ ಮಹಾಸ್ವಾಮಿಗಳು, ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಸತೀಶ ಜಾರಕಿಹೊಳಿ, ಶಾಸಕರಾದ ಸನ್ಮಾನ್ಯ ಬಾಬಾ ಸಾಹೇಬ್ ಪಾಟೀಲ್, ಕಸಾಪ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಊರಿನ ಗಣ್ಯರು ಉಪಸ್ಥಿತರಿದ್ದರು.