ಸೀರೆ, ಡ್ರೆಸ್ ತುಂಬಿದ ವಾಹನ ತಡೆದ ಜೆಡಿಎಸ್ ಕಾರ್ಯಕರ್ತರು… ಕಾಂಗ್ರೆಸ್ ಮೇಲೆ ಆರೋಪ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ರಾಮನಗರ: ಲೋಕ ಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ, ಇದರ ನಡುವೆ ಅಲ್ಲಲ್ಲಿ ಹಣ ಸಾಗಾಟದ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಇದರ ನಡುವೆ ರಾಮನಗರ ದ್ಯಾವರಸೇಗೌಡನ ದೊಡ್ಡಿ ಬಳಿಯ ಗೋಡೌನ್ ನಲ್ಲಿ ಅಕ್ರಮ ಸೀರೆ ಸಂಗ್ರಹವಾಗಿರುವ ಪ್ರಕರಣವನ್ನು ಜೆಡಿಎಸ್ ಕಾರ್ಯಕರ್ತರು ಬೆಳಕಿಗೆ ತಂದಿದ್ದಾರೆ.
ಇಲ್ಲಿನ ಗೋಡೌನ್ ಒಂದರಲ್ಲಿ ಸಂಗ್ರಹಿಸಲಾಗಿದ್ದ ಸೀರೆ ಹಾಗೂ ಡ್ರೆಸ್ ಗಳನ್ನು ವಾಹನದಲ್ಲಿ ತುಂಬಿಸಿ ಸಾಗಿಸುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ತಡೆದಿದ್ದಾರೆ.
ಕಾಂಗ್ರೆಸ್ ನಾಯಕರಿಂದ ಮತದಾರರಿಗೆ ಹಂಚಲು ಸಂಗ್ರಹಿದ್ದ ಆರೋಪ ಕೇಳಿಬಂದಿದ್ದು. ಜೆಡಿಎಸ್ ಕಾರ್ಯಕರ್ತರು ವಾಹನ ತಡೆಗಟ್ಟುತ್ತಿದಂತೆ ಪರಾರಿಯಾದ ಗೋಡೌನ್ ಸಿಬ್ಬಂದಿ.
ಸ್ಥಳಕ್ಕೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್, ಡಿಎಸ್ಪಿ ದಿನಕರ್ ಶೆಟ್ಟಿ ಭೇಟಿ, ಪರಿಶೀಲನೆ ನಡೆಸುತ್ತಿದ್ದು ಪೊಲೀಸರು ಸೀರೆ ದಾಸ್ತಾನು ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ‌ನಡೆದಿದೆ.

Post a Comment

0Comments

Post a Comment (0)