ಮುರಗೋಡ, ಮಾರ್ಚ್14: ಮುರಗೋಡದ ಮಹಾಂತ ದುರದುಂಡೀಶ್ವರ ಮಠದಲ್ಲಿ ಲಿಂಗೈಕ್ಯ ಮಹಾಂತ ಶಿವಯೋಗಿಗಳ 52ನೇ ಪುಣ್ಯ ಸ್ಮರನೋತ್ಸವ ಹಿನ್ನೆಲೆ ನಿತ್ಯವೂ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಮಾರ್ಚ್ ೧೮ ರಂದು ಸಂಜೆ ೭ ಗಂಟೆಗೆ ಮಹಿಳಾ ಗೋಷ್ಠಿ ನಡೆಯಲಿದೆ.
ಮುರಗೋಡ ಮಠದ ನೀಲಕಂಠ ಸ್ವಾಮೀಜಿ ಸಾನಿಧ್ಯ, ಮುನವಳ್ಳಿ ಮಠದ ಮುರಘಂದ್ರ ಸ್ವಾಮೀಜಿ ಅಧ್ಯಕ್ಷತೆ, ಮನಕವಾಡ ಹಿರೇವಡರಟ್ಟಿ ಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ನೇತ್ವತ್ವ ವಹಿಸಿಕೊಳ್ಳಲಿದ್ದಾರೆ.
ಮಾರ್ಚ್ ೧೯ ರಂದು ಸಂಜೆ ೭ ಗಂಟೆಗೆ ಗುರುವಂದನೆ ಹಾಗೂ ಹಳೆಯ ಪಾಠಶಾಲಾ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ.
ಮುರಗೋಡ ಮಠದ ನೀಲಕಂಠ ಸ್ವಾಮೀಜಿ ಸಾನಿಧ್ಯ, ಹರಿಹರದ ವಚನಾನಂದ ಸ್ವಾಮೀಜಿ ಅಧ್ಯಕ್ಷತೆ, ಹೊಸಳ್ಳಿ ಭೂದೀಶ್ವರ ಮಠದ ಅಭಿನವ ಭೂದೀಶ್ವರ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ತಮಕೂರು ಸಂಸ್ಕಾನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ಮಾರ್ಚ್ ೨೦ ರಂದು ಬೆಳಿಗ್ಗೆ ೬ ಗಂಟೆಗೆ
ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆಯ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚಣೆ, ಮಹಾ ಮಂಗಳಾರತಿ ನೆರವೇರಲಿದೆ. ಮಧ್ಯಾಹ್ನ ೧೨ ಗಂಟೆಗೆ ಉಚಿತ ಸಾಮೂಹಿ ವಿವಾಹ, ಮಧ್ಯಾಹ್ನ ೧ ಗಂಟೆಗೆ ಭಕ್ತರಿಗೆ ಮಹಾಪ್ರಸಾದ, ಮಧ್ಯಾಹ್ನ ೩ ಗಂಟೆಗೆ ಶ್ರೀ ರಥದ ಮಾಲೆಗೆಳ ಮೆರವಣಿಗೆ, ಸಂಜೆ ೫ ಗಂಟೆಗೆ ಮಹಾಂತ ಶಿವಯೋಗಿಗಳ ಮೂರ್ತಿ ಪೂಜೆ, ಸಕಲ ವಾದ್ಯಗಳೊಂದಿಗೆ ಮಹಾ ರಥೋತ್ಸವ ಜರುಗಲಿದೆ. ಸಂಜೆ ೭ ಗಂಟೆಗೆ ಮಹಾಂತ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ.
ಇಡೀ ಜಾತ್ರಾ ಮಹೋತ್ಸವ ಸಂಪನ್ನವಾಗುವ ವರೆಗೆ ನಿತ್ಯವೂ ಶ್ರೇಷ್ಠ ಮಠಗಳ ಸ್ವಾಮೀಜಿಗಳು, ಗಣ್ಯರು, ಸಾಧಕರು ಶ್ರೀಗಳ ಸ್ಮರಣೋತ್ಸವದಲ್ಲಿ ಭಾಗವಹಿಸಲಿದ್ದು, ಭಕ್ತ ಸಮೂಹ ನಿರಂತರ ಸೇವೆಯಲ್ಲಿ ನಿರತವಾಗಿದೆ.