ಬೆಳಗಾವಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು
ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ರಿ ಬೆಳಗಾವಿ ಇವರ ವತಿಯಿಂದ ಮಹಿಳಾ ದಿನಾಚರಣೆಯನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಲಾಯಿತು .
*ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಒಂದು ಅರ್ಥಪೂರ್ಣ ಸಮಾರಂಭ ಅದ್ಧೂರಿಯಾಗಿ ನೆರವೇರಿತು.... ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಬೆಳಗಾವಿ ಜಿಲ್ಲಾ ಮಹಿಳಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶಿಷ್ಟ, ವಿಭಿನ್ನ ಹಾಗೂ ವಿನೂತನವಾಗಿ ಜರುಗಿದ ಕಾರ್ಯಕ್ರಮದಲ್ಲಿ ಮಹಿಳಾ ಶಕ್ತಿ ಪ್ರದರ್ಶನ ನೆಡೆಯಿತು. ಶತ ಶತಮಾನಗಳಿಂದಲೂ ಹೆಣ್ಣಿನ ಬದುಕಿನ ಅನಾವರಣವೇ ಕಾರ್ಯಕ್ರಮ ಉದ್ದಕ್ಕೂ ಅಥಿತಿಗಳಿಂದ, ಉಪನ್ಯಾಸಕರಿಂದ ಮಹಿಳೆಯರಲ್ಲಿ ಜಾಗೃತಿ, ಸ್ವಾಭಿಮಾನ ಮೂಡಿಸುವ ಪ್ರಯತ್ನ ನೆಡೆಯಿತು, ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಹರ್ಷಾ ಲಟ್ಟೆ ಒಕ್ಕೂಟದ ಗೌರವಾಧ್ಯಕ್ಷರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀಮತಿ ಇಂದಿರಾ ಹೊಳ್ಕರ ರಾಣಿ ಪಾರ್ವತಿ ದೇವಿ ಕಾಲೇಜು ಬೆಳಗಾವಿ ಇವರು ಮಾತನಾಡಿದರು. ಸಮಾಜದ ಹಿರಿಯರು ಶ್ರೀ ಕಿಶೋರ್ ಬಡಗಾವಿ, ಆನಂದ ಲಟ್ಟೆ, ಲೋಹಿತ್ ಮೊರಕರ , ಆನಂದ್ ಉಪರಿ, ಒಕ್ಕೂಟದ ಜಿಲ್ಲಾ ಅಧ್ಯಕ್ಷರು ಶ್ರೀ ಗಜಾನನ ಗುಂಜೇರಿ, ಮಹಿಳಾ ವಿಭಾಗ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಲಲಿತಾ ಢಗೆ ಹಾಗೂ ಸುಮಾರು 500 ಕ್ಕೂ ಹೆಚ್ಚು ಮಹಿಳಾ ಸಹೋದರಿಯರು ಸಮಾರಂಭಕ್ಕೆ ಸಾಕ್ಷಿಯಾದರು.
ವರದಿ ಕಿತ್ತೂರು ಕ್ರಾಂತಿ