*ಮಲಪ್ರಭೆಯ 25ವರ್ಷದಿಂದ ಸ್ಥಗಿತಗೊಂಡ 11ಏತನೀರಾವರಿ ಮರುಚಾಲನೆ ನೀಡಿದ ಸಿ.ಎಂ.ಗೆ ನನ್ನ 62ನೇ ಜನ್ಮದಿನದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು - ಬಿ.ಎಂ.ಚಿಕ್ಕನಗೌಡರ.*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಮಲಪ್ರಭೆಯ 25ವರ್ಷದಿಂದ ಸ್ಥಗಿತಗೊಂಡ 11ಏತನೀರಾವರಿ ಮರುಚಾಲನೆ ನೀಡಿದ ಸಿ.ಎಂ.ಗೆ ನನ್ನ 62ನೇ ಜನ್ಮದಿನದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು - ಬಿ.ಎಂ.ಚಿಕ್ಕನಗೌಡರ.*
*" ಕಿತ್ತೂರಕರ್ನಾಟಕ ರಕ್ಷಣಾ ವೇದಿಕೆ"* 
       *ಮಲಪ್ರಭಾ ನದಿಯ ಆಣೆಕಟ್ಟಿನ ಮೇಲ್ಬಾಗದ ಎರಡು ಬದಿಗೆ 1971 ರಲ್ಲಿ ದಿ. ಶ್ರೀ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಿದ್ದಾಗ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರು. 11 ಏತನೀರಾವರಿ ಯೋಜನೆಗಳಿಂದ ಗ್ರಾಮ* *ಮತ್ತು ಭೂಮಿ ಮುಳುಗಡೆಯಾದ ರೈತರ ಒಟ್ಟು 55ಸಾವಿರ ಎಕರೆ ಜಮೀನು ನೀರಾವರಿಯನ್ನು 1974ರಲ್ಲಿ ಮುಖ್ಯಮಂತ್ರಿ ದಿ. ಶ್ರೀ ದೇವರಾಜ್ ಅರಸು ಉದ್ಘಾಟಿಸಿದ್ದರು. ಅವು ಇನ್ನಿತರ* *ಕಾರಣಗಳಿಂದ ಸುಮಾರು 25 ವರ್ಷಗಳಿಂದ ಸ್ಥಗಿತಗೊಂಡಿತ್ತವೆ.* 
         *ಏತನೀರಾವರಿ ಪ್ರದೇಶದ ರೈತರೊಂದಿಗೆ ಬೈಲಹೊಂಗಲದ ಬೈಪಾಸ್ ಕಲ್ಯಾಣ ಮಂಟಪದಲ್ಲಿ ದಿ.9/3/2022 ರಂದು ನಾನು ನನ್ನ 60ನೇ ಜನ್ಮದಿನವನ್ನು* *ಸ್ಥಗಿತಗೊಂಡ 11ಏತನೀರಾವರಿ ಯೋಜನೆಗೆ ಮರು ಚಾಲನೆಗೆ ಆಗ್ರಹಿಸಿ ಚೆನ್ನಮ್ಮಾಜಿ ವೃತ್ತದ ವರೆಗೆ ಪಾದಯಾತ್ರೆ ಮೂಲಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸುವುದರ ಮೂಲಕ ನನ್ನ 60ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದು* 
 *ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಘನ್ಯೆಮಾನ್ಯೆರ ಭಾವ ಚಿತ್ರ ತಮ್ಮ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇವೆ* .                  
          *ಅಂದಿನ ಮುಖ್ಯಮಂತ್ರಿ ಶ್ರೀ ಬೊಮ್ಮಾಯಿಯವರಿಗೆ ನೇರವಾಗಿ ಬೇಟಿಯಾಗಿ ಮನವಿ ಸಲ್ಲಿಸಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ* *. 2024ರ ಬಜೆಟ್ ಅಧಿವೇಶನದಲ್ಲಿ ಶ್ರೀ ಸಿದ್ದರಾಮಯ್ಯನವರು ಸ್ಥಗಿತಗೊಂಡ 11ಏತನೀರಾವರಿ ಯೋಜನೆಗೆ ಅನುದಾನ ಘೋಷಿಸಿದ ಮುಖ್ಯಮಂತ್ರಿಗಳಿಗೂ ಜಲಸಂಪನ್ಮೂಲ* *ಸಚಿವ ಶ್ರೀ ಡಿ.ಕೆ.ಶಿವಕುಮಾರರವರಿಗೂ ಸ್ಥಳಿಯ ಶಾಸಕ ಶ್ರೀ ಮಹಾಂತೇಶ ಕೌಜಲಗಿಯವರಿಗೂ* *ಇಂದು ಶುಕ್ರವಾರ ದಿ.9/3/24ರಂದು ನನ್ನ 62ನೇ ಜನ್ಮದಿನದ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ* .
       *ನನ್ನ 62ಜನ್ಮ ದಿನಾಚರಣೆಗೆ ಶುಭಾಶಯಗಳನ್ನು ತಿಳಿಸಿದ ಎಲ್ಲಾ ಘನ್ಯೆಮಾನ್ಯೆರಿಗೆ ಹೃತ್ಪೂರ್ವಕ ಧನ್ಯವಾದಗಳು.* 
        *ಬಸನಗೌಡ. ಮ. ಚಿಕ್ಕನಗೌಡರ.* 
              *ಮಾಜಿ. ಜಿ.ಪಂ.ಸದಸ್ಯರು. ಬೆಳಗಾವಿ.*

Post a Comment

0Comments

Post a Comment (0)