ಸುದ್ದಿಗಳು
Facebook, Instagram ಸರ್ವರ್ ಡೌನ್, ಸೇವೆಯಲ್ಲಿ ವ್ಯತ್ಯಾಸ; 829 ಕೋಟಿ ರೂಪಾಯಿ ನಷ್ಟ
ವಾಷಿಂಗ್ಟನ್: ವಿಶ್ವಾದ್ಯಂತ ಜನಪ್ರಿಯ ಜಾಲತಾಣವಾದ ಫೇಸ್ ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಸಮಸ್ಯೆಯಿಂದ ಬಳಕೆದಾರರು ಪರದಾಡುವಂತಾಗಿತ್ತು. ಅಷ್ಟೇ ಅಲ್ಲ ಷೇರುಗಳ ಬೆಲೆಯೂ ಗಣನೀಯ ಕುಸಿತ ಕಂಡಿದ್ದು, ಇದರಿಂದ 829 ಕೋಟಿ ರೂಪಾಯಿ ನಷ್ಟವಾಗುವ ಮೂಲಕ ಮಾರ್ಕ್ ಜುಗರ್ ಬರ್ಗ್ ಒಡೆತನದ ಮೆಟಾ ಮತ್ತೊಮ್ಮೆ ದೊಡ್ಡ ಸುದ್ದಿಯಲ್ಲಿದ್ದಂತಾಗಿದೆ.
ಮೆಟಾದ ಜನಪ್ರಿಯ ಜಾಲತಾಣಗಳಾದ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ಥ್ರೆಡ್ಸ್ ಭಾರತ ಸೇರಿದಂತೆ ಜಾಗತಿಕವಾಗಿ ಸರ್ವರ್ ಡೌನ್ ಆಗಿ ಎಲ್ಲರ ಖಾತೆಗಳು (ಮಂಗಳವಾರ ರಾತ್ರಿ 8.53) ದಿಢೀರನೆ ಲಾಗ್ ಔಟ್ ಆಗಿತ್ತು.
ಸಾಮಾಜಿಕ ಜಾಲತಾಣ ಲಾಗ್ ಔಟ್ ಆದ ಘಟನೆಯ ಬೆನ್ನಲ್ಲೇ ಹಲವಾರು ಮಂದಿ ಎಕ್ಸ್ ನಲ್ಲಿ ತಮ್ಮ ಭಾವನೆಯನ್ನು ಹೊರಹಾಕಿದ್ದಾರೆ. Instagram/Facebook ಡೌನ್ ಆಗಿರುವುದು ಭಾರತ ಮತ್ತು ವಿದೇಶದಲ್ಲೂ ಟ್ರೆಂಡಿಂಗ್ ಆಗಿತ್ತು.
ಭಾರತದಲ್ಲಿ ಸಾವಿರಾರು ಬಳಕೆದಾರರ ಫೇಸ್ ಬುಕ್, ಇನ್ಸ್ಟಾಗ್ರಾಮ್ ಖಾತೆಗಳು ದಿಢೀರನೆ ಲಾಗ್ ಔಟ್ ಆಗಿದ್ದು, ನಂತರ ಸಮಸ್ಯೆ ಕುರಿತು ಗಮನಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ.