Suspended: ವಕೀಲರ ವಿರುದ್ಧ ಎಫ್ ಐಆರ್ ದಾಖಲಿಸಿದ್ದ ಪಿಎಸ್ ಐ ತನ್ವೀರ್ ಹುಸೇನ್ ‌ಅಮಾನತ್ತು.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
Suspended: ವಕೀಲರ ವಿರುದ್ಧ ಎಫ್ ಐಆರ್ ದಾಖಲಿಸಿದ್ದ ಪಿಎಸ್ ಐ ತನ್ವೀರ್ ಹುಸೇನ್ ‌ಅಮಾನತ್ತು.
ರಾಮನಗರ: ವಕೀಲರ ವಿರುದ್ಧ ಎಫ್ ಐಆರ್ ದಾಖಲಿಸಿದ್ದ ಪಿಎಸ್ ಐ ತನ್ವೀರ್ ಹುಸೇನ್ ಅವರನ್ನು ಅಮಾನತ್ತುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ವಕೀಲರ ವಿರುದ್ಧ ದಾಖಲು ಮಾಡಿದ್ದ ಎಫ್ ಐಆರ್ ರದ್ದು ಮಾಡುವಂತೆ ವಕೀಲರ ಸಂಘ ಕಳೆದ ಮೂರೂ ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ ಇದಕ್ಕೆ ರಾಜಕೀಯ ನಾಯಕರೂ ಕೈಜೋಡಿಸಿದ್ದು ಸದನದಲ್ಲೂ ಈ ವಿಚಾರ ಮುನ್ನೆಲೆಗೆ ಬಂದಿತ್ತು ಇದರ ಮುಂದಿನ ಭಾಗವಾಗಿ ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ವಕೀಲರು ಗುರುವಾರ ವಿಧಾನಸೌಧ ಚಲೋಗೆ ಸಿದ್ದತೆ ಮಾಡಿಕೊಂಡಿದ್ದರು.
ಇದರ ನಡುವೆ ವಿಧಾನ ಸಭೆಯಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಪಿಎಸ್ ಐ ತನ್ವೀರ್ ಹುಸೇನ್ ಅವರನ್ನು ಅಮಾನತ್ತು ಮಾಡಿರುವುದಾಗಿ ಹೇಳಿದ್ದಾರೆ. ಇದರೊಂದಿಗೆ ಮೂರೂ ದಿನಗಳಿಂದ ನಡೆಯುತ್ತಿದ್ದ ವಕೀಲರ ಧರಣಿ ಕೊನೆಗೊಂಡಿದೆ.
ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವರು ವಿವಾದದ ಕೇಂದ್ರ ಬಿಂದು ವಾಗಿರುಗ ವಕೀಲ ಚಾನ್ ಪಾಷಾ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

Post a Comment

0Comments

Post a Comment (0)