ಬ್ರಿಟಿಷರ ವಿರುದ್ಧ ಕ್ರಾಂತಿಯ ಹೋರಾಟ ಮಾಡಿ ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಕ್ರಾಂತಿಯ ಕಿಡಿ ಎಬ್ಬಿಸಿದ ನಾಡು ಕಾಣದ ಅಭಿವೃದ್ಧಿ...
ಕ್ರಾಂತಿ ಕಹಳೆಗೆ 200 ವರ್ಷ ಆದರೂ ಅಳಿವಿನಂಚಿನತ್ತ ಹೊರಟ ಇತಿಹಾಸ
16 ನೇ ಶತಮಾನದಿಂದ ಇತ್ತೀಚೆಗೆ ಬೆಳಕಿಗೆ ಬಂದ ಕಿತ್ತೂರು 1824 ರ ಸ್ವತಂತ್ರ ಯುದ್ಧದ ನಂತರ ಇತಿಹಾಸದಲ್ಲಿ ಅವರವಾದದ್ದು ಕನ್ನಡಿಗರ ಹೆಮ್ಮೆ.
ರಾಜಗುರು ಸಂಸ್ಥಾನದ ಗುರು ಮಾರ್ಗದರ್ಶನದಲ್ಲಿ ಬೆಳೆದ ಕಿತ್ತೂರು ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಮೊದಲ ಸೋಲಿನ ರುಚಿ ತೋರಿಸಿದ್ದು ಸಹ ಇತಿಹಾಸದಲ್ಲಿ ಅತ್ಯಂತ ಭವ್ಯವಾಗಿ ದಾಖಲಾಗಿದೆ.
ಒಂದು ಚಿಕ್ಕ ಸಂಸ್ಥಾನ ಆದರೂ ಯಾವ ಬೃಹತ್ ಸಾಮ್ರಾಜ್ಯಕ್ಕೂ ಕಮ್ಮಿ ಇಲ್ಲದ ಹಾಗೆ ಮಸಾಲೆ ಮಾರಾಟ ಮಾಡಲು ಬಂದ ಕಮಂಗಿಗಳ ದಬ್ಬಾಳಿಕೆ ವಿರುದ್ಧ ನೇರವಾಗಿ ಹೋರಾಡಿ ಭಾರತಕ್ಕೆ ಮೊದಲ ಸ್ವಾತಂತ್ರ್ಯ ಕೊಟ್ಟ ಇದೇ ಕಿತ್ತೂರು ಇಂದು ಸರ್ಕಾರದ ನಿರ್ಲಕ್ಷಕ್ಕೆ ಅಳಿವಿನಂಚಿನಲ್ಲಿ.
ಶೌರ್ಯ ಪರಾಕ್ರಮಗಳನ್ನ ಇತಿಹಾಸದ ಪುಟಗಳಲ್ಲಿ ಸಾರಿ ಸಾರಿ ಹೇಳುವ ಕಿತ್ತೂರಿನ ಭವ್ಯ ಪರಂಪರೆಯ ಅದೆಷ್ಟೋ ಪ್ರಸಿದ್ಧ ತಾಣಗಳು ಇಂದು ಹೇಳ ಹೆಸರಿಲ್ಲದ ಹಾಗೆ ಮರೆಯಾಗಿ ಹೋಗಿವೆ ಆದರೂ ಸರ್ಕಾರದ ದೃಷ್ಟಿಯಲ್ಲಿ ಸಾಧನೆಗೊಂದು ಪ್ರಾಧಿಕಾರದ ರಚನೆ ಯಾಕೆ..?
ತನ್ನ ಕುಟುಂಬದ ರಕ್ಷಣೆಗಾಗಿ ಚೆನ್ನಮ್ಮ ಹೋರಾಟ ಮಾಡಿಲ್ಲ, ಬದಲಾಗಿ ಇಡೀ ನಾಗರಿಕ ಸಮುದಾಯವನ್ನು ತನ್ನ ಒತ್ತೇ ಆಳುಗಳಂತೆ ಆಳುತ್ತಿದ್ದ ಕಮಂಗಿಗಳಾದ ಬ್ರಿಟಿಷರ ವಿರುದ್ಧ ಸ್ವಾಭಿಮಾನದಿಂದ ಹೋರಾಡಿ ಭಾರತಕ್ಕೆ ಮೊದಲ ಸ್ವಾತಂತ್ರ ಕೊಟ್ಟ ವೀರ ವನಿತೆ ಎಂಬುದನ್ನು ಮರೆತ ಸರ್ಕಾರ ತನ್ನ ರಾಜಕೀಯ ದುರುದ್ದೇಶಕ್ಕೆ ಒಬ್ಬ ಮಹಿಳೆಯ ಮಹಾನ್ ಇತಿಹಾಸವನ್ನ ಮರೆಮಾಚುತ್ತಿರುವುದು ಯಾಕೆ..?
ಕಿತ್ತೂರು ಇತಿಹಾಸಕ್ಕೆ ಸಂಬಂಧಿಸಿದ ಅದೆಷ್ಟೋ ಕುರುಹುಗಳು, ಪ್ರಸಿದ್ಧ ತಾಣಗಳು, ಪ್ರೇಕ್ಷಣೀಯ ಸ್ಥಳಗಳು, ಕೋಟೆ ಕಂದಕಗಳನ್ನ ಬೆಳಕಿಗೆ ತರುವಲ್ಲಿ ಸರ್ಕಾರ ಯಾಕೆ ಮೀನಾ ಮೇಷ ಎನಿಸುತ್ತಿದೆ. 200 ಕಳೆದರೂ ಅಭಿವೃದ್ಧಿಯಲ್ಲಿ ಸರ್ಕಾರ ಮಾಡಿದ ಸಾಧನೆ ಏನು...?
ಕೇವಲ ಸಭೆ ಸಮಾರಂಭ ವೈಯಕ್ತಿಕ ಪ್ರತಿಷ್ಠೆಗಾಗಿ ಚೆನ್ನಮ್ಮಾಜಿ ಹೆಸರು ಬಳಸಿಕೊಳ್ಳುವ ಸರ್ಕಾರ ಅಧಿಕಾರಿ ವರ್ಗದ ದಿವ್ಯ ನಿರ್ಲಕ್ಷದಲ್ಲಿರುವ ಕಿತ್ತೂರಿನ ಇತಿಹಾಸ ಬೆಳಕಿಗೆ ತರುವವರು ಯಾರು..? ಇದಕ್ಕೆ ಯಾರು ಹೊಣೆ..? ಯಾವ ಪ್ರತಿಷ್ಠೆಗಾಗಿ ನಿಮ್ಮ ಈ ನಿರ್ಲಕ್ಷ..? ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಈ ನಿಮ್ಮ ನಾಟಕ ಯಾಕೆ...? ನಿಮ್ಮಲ್ಲಿ ಸ್ವಾಭಿಮಾನ ಇದೆಯೇ... ಇತಿಹಾಸದ ಅರಿವಿದೆಯೇ... ಸರ್ಕಾರಕ್ಕೆ ನೇರ ಪ್ರಶ್ನೆ..?
ಶ್ರೀ ಮಹಾಂತೇಶ್ ಹಿರೇಮಠ ಅವರ ಸಾಹಿತ್ಯದಲ್ಲಿ....