*ದೇವೇಂದ್ರ ಪೆಡ್ನಾವೀಸ್ ಸರ್ಕಾರ 2016ರಲ್ಲಿ ಮಾಹಾರಾಷ್ಟ್ರ ಮಾದರೀಯ ಶೇ16ರ ಪ್ರಮಾಣದ ಪ್ರತ್ಯೇಕ ಮೀಸಲಾತಿ ಮಸೂದೆ ಸರ್ವಾನುಮತದಿಂದ ಜಾರಿಗೆ ತಂದಿತ್ತು. ಸಂಸತ್ತಿನ ಶೆಡ್ಯೂಲ್ 9ರ ಮೀಸಲಾತಿ ಅನುಮೋದನೆ ಬಾಕಿ ಉಳಿಸಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಪರಾಭವದ ಸಂಕಷ್ಟದಿಂದಾಗಿ ನೆನೆಗುದಿಗೆ ಬಿದ್ದಿದ್ದು ನಂತರ ಸರ್ವೋಚ್ಚ ನ್ಯಾಯಾಲಯ ಈ ಮಸೂದೆಯನ್ನು ರದ್ದುಗೊಳಿಸಿತ್ತು.*
*ಇದೇ ಮಾದರಿಯನ್ನು ಏಕನಾಥ ಸಿಂಧೆಯವರ ಹಾಲಿ ಸರ್ಕಾರ ಶೇ10ರ ಮರಾಠ ಸಮಾಜಕ್ಕೆ ವಿಶೇಷ ಮೀಸಲಾತಿ ನೀಡಿ ಈ ಮಸೂದೆ ಅಂಗೀಕರಿಸಿದೆ. ಸಂಸತ್ತಿನ ಶೆಡ್ಯೂಲ್ 9 ನಿಯಮಾವಳಿಯಲ್ಲಿ ಕೇಂದ್ರದ ಅನುಮೋದನೆ ದೊರೆತರೆ ಮಾತ್ರ ಶೇ62ರ ಮೀಸಲಾತಿ ಪ್ರಮಾಣದ ಏರಿಕೆಗೆ ಮಾದರಿಯಾಗಿಬಲ್ಲದು.*
*ಕರ್ನಾಟಕದ ವಿಷಯಕ್ಕೆ ಬಂದರೆ ಮಾಹಾರಾಷ್ಟ್ರದಲ್ಲಿ ಮರಾಠ ಸಮಾಜದ ಪ್ರಭಾವ ಯಾವ ಪ್ರಮಾಣದಲಿದೇ ಅದೇ ಪ್ರಮಾಣದಲ್ಲಿ ಲಿಂಗಾಯತ ಸಮಾಜ ಕರ್ನಾಟಕದಲ್ಲಿದೆ. ಮರಾಠ ಸಮಾಜ ಮಾಹಾರಾಷ್ಟ್ರದಲ್ಲಿ ಎದುರಿಸಿತ್ತಿರುವ ಮೀಸಲಾತಿ ಸಂಕಷ್ಟವನ್ನು ಕರ್ನಾಟಕದಲ್ಲಿ ಲಿಂಗಾಯತ ಸಮಾಜ ಎದುರಿಸುತ್ತಿದೆ. ಮರಾಠ ಮಾದರಿಯ ಮೀಸಲಾತಿ ವಿಶೇಷ ಸೌಲಭ್ಯ ಪಡೆಯುವ ಎಲ್ಲಾ ಅರ್ಹತೆ ಕರ್ನಾಟಕದ ಲಿಂಗಾಯತರಿಗೆ ಇದೆ. ಆದರೆ ಮರಾಠ ಮೀಸಲಾತಿ ನಾಯಕ ಮನೋಜ್ ಜರಾಂಗೆ ಎಂಥ ಹೋರಾಟಗಾರರ ಮತ್ತು ವಕ್ಕಟ್ಟಿನ ಕೊರತೆ ಎದುರಿಸುತ್ತಿದೆ ಎಂದು ಸಮಸ್ತ ಲಿಂಗಾಯತ ಹೋರಾಟ ವೇದಿಕೆ ಮುಖ್ಯ ಸಂಘಟಿಕ ಶ್ರೀ ಬಿ.ಎಂ. ಚಿಕ್ಕನಗೌಡರ ಆಗ್ರಹಿಸಿದ್ದಾರೆ.