ಸವದತ್ತಿ : ತಾಲೂಕಿನ ಮಾಡನಗೇರಿ ಗ್ರಾಮ ಪಂಚಾಯತಿ ಬಾರಿ ಚರ್ಚೆಗೆ ಗ್ರಾಮವಾಗಿದೆ ಮಾಡನಗೇರಿ NA ಪ್ಲಾಟ್ ಪ್ರಕರಣಕ್ಕೆ ಹೊಸ ತಿರುವು ಪಡೆದಿದ್ದು. ಗಂಭೀರ ಆರೋಪಕ್ಕೆ ಗ್ರಾಮ ಪಂಚಾಯತಿ ಪಿಡಿಓ ಸಂಭಾಷಣೆ ಮುಖಾಂತರ ಸ್ಪಷ್ಟೀಕರಣ ನೀಡಿದ್ದಾರೆ.
ನಕಲಿ ದಾಖಲೆ ಸೃಷ್ಟಿ ಮಾಡಿ 6 ಗುಂಟೆ NA ಪ್ಲಾಟ್ 3 ಕೋಟಿಗೆ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಗ್ರಾಮ ಪಂಚಾಯತಿ ಪಿಡಿಓ ಸ್ಪಷ್ಟೀಕರಣ ನೀಡಿದ್ದು. ತಮ್ಮ ಮೇಲೆ ಮಾಡಲಾಗಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಛಾಪಾ ಕಾಗದ ನಕಲಿ ಮತ್ತು ಅಸಲಿ ಎಂದು ಚೆಕ್ ಮಾಡುವ ಮಷಿನ್ ನಮ್ಮಲ್ಲಿ ಇಲ್ಲ. ನಾವು ನೋಟರಿ ಆಧಾರದ ಮೇಲೆ ನಮ್ಮ ಕೆಲಸವನ್ನು ಮಾಡಿದ್ದೇವೆ ಅವರು ಮಾಡಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ.
ಅದೇ ರೀತಿ ಅವರು ಮಾಡುತ್ತಿರುವ ಆರೋಪಗಳು ಸುಳ್ಳು ಅದಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ನಾನು ನನ್ನ ಕೆಲಸವನ್ನು ಸಂಪೂರ್ಣವಾಗಿ ನೋಟರಿ ದಾಖಲೆಯ ಆಧಾರದ ಮೇಲೆ ಮಾಡಿದ್ದೇನೆಯೇ ಹೊರತು ಬೇರೆ ಮಾರ್ಗದಿಂದ ಅಲ್ಲ ಎಂದು ಗ್ರಾಮ ಪಂಚಾಯತಿ ಪಿಡಿಓ ಇಂದು ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
ವಿಶೇಷ ಸೂಚನೆ : ಈ ಪ್ರಕರಣದ ಸಂಪೂರ್ಣ ವರದಿಯನ್ನು ಅತಿ ಶೀಘ್ರದಲ್ಲಿ ನೇರಾ ನೇರ ಸಂದರ್ಶನದ ಮೂಲಕ ತಮ್ಮ ಮುಂದೆ... ನಾಳೆ