ರಾಮನಗರ: ಡಿಸಿ ಕಚೇರಿಗೆ ವಕೀಲರಿಂದ ಮುತ್ತಿಗೆ!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ರಾಮನಗರ: ಡಿಸಿ ಕಚೇರಿಗೆ ವಕೀಲರಿಂದ ಮುತ್ತಿಗೆ!
ರಾಮನಗರ: ಪಿಎಸ್ಐ ಅಮಾನತ್ತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ವಕೀಲರ ಪ್ರತಿಭಟನೆ ತೀವ್ರಗೊಂಡಿದ್ದು ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ ಹಾಕಲಾಗಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲೇ ಉಳಿದುಕೊಳ್ಳುವಂತಾಗಿದೆ.
ಎರಡೂ ಗೇಟ್ ಮುಂಭಾಗದಲ್ಲಿ ವಕೀಲರು ಧರಣಿ ಕುಳಿತಿದ್ದು ಡಿಸಿ, ಎಸ್ಪಿ ಮನೆಗೆ ಹೋಗದ ಹಾಗೆ ಮಾಡಲಾಗಿದೆ.
ಡಿಸಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಎಸ್ಪಿ ಕಾರ್ತಿಕ್ ರೆಡ್ಡಿ ಕಚೇರಿಯಲ್ಲೇ ಕುಳಿತಿದ್ದಾರೆ. ಇಡೀ ರಾತ್ರಿ‌ ಧರಣಿ ಕುಳಿತುಕೊಳ್ಳುತ್ತೇವೆ ಎಂದು ವಕೀಲರು ಪಟ್ಟು ಹಿಡಿದಿದ್ದಾರೆ.
ಯಾವುದೇ ಕಾರಣಕ್ಕೂ ಡಿಸಿ, ಎಸ್ಪಿಯನ್ನು ಬಿಡಲ್ಲ ಎನ್ನುತ್ತಿದ್ದಾರೆ. ನ್ಯಾಯವೆಲ್ಲಿ ಅಡಗಿದೆ, ಎಲ್ಲಿಗೆ ಬಂತು‌ 47 ರ‌ ಸ್ವಾತಂತ್ರ್ಯ ಹಾಡು ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ.
ಪ್ರತಿಭಟನಾ‌ನಿರತ ವಕೀಲರನ್ನು ಭೇಟಿಮಾಡಲು ಮಾಜಿ ಸಿಎಂ‌ ಎಚ್.ಡಿ.ಕುಮಾರಸ್ವಾಮಿ ಸ್ಥಳಕ್ಕೆ ಆಗಮಿಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.




Post a Comment

0Comments

Post a Comment (0)